ಬೆಂಗಳೂರು : ನಾಳೆ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದಾರೆ, ಟ್ವೀಟ್ ಮೂಲಕ ಸರ್ಕಾರ ವಿರುದ್ಧ ಆಕ್ರೋಶ ಹೊರಗೆ ಹಾಕುತ್ತಿದ್ದಾರೆ.
Breaking News: ಮಂಡ್ಯದಲ್ಲಿ ಮೂಡಾ ಹಗರಣ; ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ, 5 ಕೋಟಿ ದಂಡ
ಕಳೆದ ಎರಡು ವರ್ಷದ ಹಿಂದೆ ಕೊರೋನಾ ದಿಂದ ಸಾಕಷ್ಟು ಜೊನರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಭ್ರಷ್ಟೋತ್ಸವ ನಡೆಸಲು ಮುಂದಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ನಿನ್ನೆ ರಾತ್ರಿ ಮುಖ್ಯಮಂತ್ರಿಗಳು ಬೆಂಗಳೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರಂತೆ!
ಹಗಲಲ್ಲೇ ಕಾಣದಿರುವುದು ರಾತ್ರಿ ಏನು ಕಾಣುತ್ತದೆ @BSBommai ಅವರೇ?
ಹಗಲಿಡೀ #BJPBrashtotsava ದ ಕೆಲಸ, ರಾತ್ರಿ ಕಾಟಾಚಾರದ ಭೇಟಿಯೇ?ನಿಮ್ಮ ಮಂತ್ರಿಗಳೆಲ್ಲ ಎಲ್ಲಿ ಹೋದರು? ಬರೀ ವೀಕ್ಷಣೆ ಮಾಡುವ ಬದಲು ಪರಿಹಾರದ ಪ್ಯಾಕೇಜ್ ಘೋಷಿಸುವುದು ಯಾವಾಗ?
— Karnataka Congress (@INCKarnataka) September 9, 2022
ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನಸ್ಪಂದನ ಸಮಾವೇಶದ ಖರ್ಚು ವೆಚ್ಚದ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಸುಧಾಕರ್ ಅವರು ಕೋವಿಡ್ ಹೆಣಗಳ ಮೇಲೆ ಮಾಡಿದ ಹಣವನ್ನು ಇಲ್ಲಿ ಚೆಲ್ಲುತ್ತಿದ್ದಾರೆ. ಈ ಸಮಾವೇಶಕ್ಕೆ ಕೋವಿಡ್ ಮೃತರ ಶಾಪ ತಟ್ಟುವುದು ನಿಶ್ಚಿತ ಎಂದು ಗುಡುಗಿದ್ದಾರೆ.
ಸರ್ಕಾರ ಕೋವಿಡ್ನಿಂದ ಮೃತರಾದವರ ಸಮಾಧಿಗಳ ಮೇಲೆ #BJPBrashtotsava ನಡೆಸಲು ಮುಂದಾಗಿದೆ.
ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನಸ್ಪಂದನ ಸಮಾವೇಶದ ಖರ್ಚು ವೆಚ್ಚದ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಸುಧಾಕರ್ ಅವರು ಕೋವಿಡ್ ಹೆಣಗಳ ಮೇಲೆ ಮಾಡಿದ ಹಣವನ್ನು ಇಲ್ಲಿ ಚೆಲ್ಲುತ್ತಿದ್ದಾರೆ.
ಈ ಸಮಾವೇಶಕ್ಕೆ ಕೋವಿಡ್ ಮೃತರ ಶಾಪ ತಟ್ಟುವುದು ನಿಶ್ಚಿತ.
— Karnataka Congress (@INCKarnataka) September 9, 2022
ಕೋವಿಡ್ ಸಮಯದಲ್ಲಿ ಲೂಟಿ ಮಾಡಿದ ಹಣದಲ್ಲಿ ಬಿಜೆಪಿ ಭ್ರಷ್ಟೋತ್ಸವ ನಡೆಯುತ್ತಿದೆ.ನಿಗದಿಯಂತೆ ಸಮಾವೇಶ ನಡೆಸಲಾಗದ ವಿಘ್ನಗಳು, ಮೂರು ಮೂರು ಭಾರಿ ದಿನಾಂಕ ಬದಲಾವಣೆ. ಸಮಾವೇಶದ ಹೆಸರು ಬದಲಾವಣೆ. ಇವೆಲ್ಲವೂ ಕೋವಿಡ್ನಿಂದ ನರಳಿದವರ ಶೋಕದ ಫಲವಲ್ಲವೇ? ಪಾಪದ ಹಣದ ಶಾಪವಲ್ಲವೇ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ಕೋವಿಡ್ಗೆ ಜನರನ್ನು ಬಲಿಕೊಟ್ಟು, ಕರೊನಾ ಹೆಸರಲ್ಲಿ ಲೂಟಿ ಮಾಡಿದ ಪಾಪದ ಹಣದಲ್ಲಿ #BJPBrashtotsava ನಡೆಯುತ್ತಿದೆ.
ನಿಗದಿಯಂತೆ ಸಮಾವೇಶ ನಡೆಸಲಾಗದ ವಿಘ್ನಗಳು,
ಮೂರ್ ಮೂರು ಭಾರಿ ದಿನಾಂಕ ಬದಲಾವಣೆ.
ಸಮಾವೇಶದ ಹೆಸರು ಬದಲಾವಣೆ.ಇವೆಲ್ಲವೂ ಕೋವಿಡ್ನಿಂದ ನರಳಿದವರ ಶೋಕದ ಫಲವಲ್ಲವೇ?
ಪಾಪದ ಹಣದ ಶಾಪವಲ್ಲವೇ?@BJP4Karnataka?— Karnataka Congress (@INCKarnataka) September 9, 2022