ಮೈಸೂರು: ಚಿತ್ರದುರ್ಗದ ಮುರುಘಾ ಶರಣರ ( Murugha Sri ) ವಿರುದ್ಧ ದಾಖಲಾಗಿರುವಂತ ಪೋಕ್ಸೋ ಕೇಸ್ ಪ್ರಕರಣದ ( POSCO Case ) ತನಿಖೆ ಮುಂದುವರೆದಿದೆ. ಸ್ವಾಮೀಜಿ ಬಂಧಿಸಲಾಗಿದ್ದು, ಸ್ಥಳ ಮಹಜರು ಸೇರಿದಂತೆ ವಿವಿಧ ತನಿಖಾ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಇದೇ ವೇಳೆಯಲ್ಲಿ ಈ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ, ಸೆಪ್ಟೆಂಬರ್ 10ರ ಶನಿವಾರದಂದು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶಕ್ಕೆ ಕರೆ ನೀಡಲಾಗಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವಂತ ಪ್ರಕರಣ ಹೊರತಂದ ಮೈಸೂರಿನ ಒಡನಾಡಿ ಸಂಸ್ಥೆಯ ( Odanai Organization ) ಸ್ಟ್ಯಾನ್ಲಿ ಹಾಗೂ ಪರಶು ಅವರು, ಆತ್ಮೀಯ ಮಿತ್ರರೇ ಹಾಗೂ ಸಮಾನ ಮನಸ್ಕ ಪ್ರಗತಿಪರ, ಸಾಮಾಜಿಕ ಬದಲಾವಣೆಯಲ್ಲಿ ತೊಡಗಿಸಿಕೊಂಡ ಸಂಘ ಸಂಸ್ಥೆಗಳ, ಜನಪರ ಸಂಘಟನೆಗಳ ಪದಾಧಿಕಾರಿಗಳೇ, ತಮಗೆಲ್ಲರಿಗೂ ಒಡನಾಡಿಯ ನಮಸ್ಕಾರಗಳು ಎಂದಿದ್ದಾರೆ.
ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟ: ರಾಜ್ಯದ ಹೃಷಿಕೇಶ್, ರುಚಾ ದೇಶಕ್ಕೆ 3, 4ನೇ Rank
ಇತ್ತೀಚೆಗೆ ತಳಮಟ್ಟದ, ದುರ್ಬಲ ಕುಟುಂಬಗಳಿಗೆ ಸೇರಿದ ಇಬ್ಬರು ಮುಗ್ಧ ಬಾಲಕಿಯರ ಮೇಲೆ ಎಸಗಲಾಗಿದ್ದ ಲೈಂಗಿಕ ದೌರ್ಜನ್ಯವನ್ನು ಬಯಲಿಗೆಳೆದು ಅದನ್ನು ಕಾನೂನಿನ ಚೌಕಟ್ಟಿಗೆ ತರುವಲ್ಲಿ ನಿಮ್ಮೆಲ್ಲರಂತೆಯೇ ಮಕ್ಕಳ ಘನತೆಯುಕ್ತ ಬಾಳ್ವೆಗೆ ಹಂಬಲಿಸುವ ಒಡನಾಡಿಯು ಪ್ರಾಮಾಣಿಕವಾಗಿ ಶ್ರಮಿಸಿರುವುದನ್ನು ತಾವೆಲ್ಲರೂ ಗಮನಿಸಿ, ತಾರ್ಕಿಕವಾಗಿ ಚಿಂತಿಸಿ, ಸಕಾಲಿಕವಾಗಿ ನಮಗೂ, ನೊಂದ ಮಕ್ಕಳಿಗೂ ಬೆಂಬಲವನ್ನು ನೀಡಿರುತ್ತೀರಿ. ಅದಕ್ಕಾಗಿ ಅನಂತಾನಂತ ವಂದನೆಗಳನ್ನು ತಿಳಿಸಿದ್ದಾರೆ.
ಸ್ನೇಹಿತರೇ, ಈ ಒಂದು ಪ್ರಕರಣವು ಹಿಂದೆ ಘಟಿಸಿರುವ ನೂರಾರು ಭಯಾನಕ ಹಾಗೂ ಭೀಭತ್ಸ್ಯಕರವಾದ ಮಕ್ಕಳ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಪ್ರಕರಣಗಳ ಗೋರಿಯನ್ನು ಬಗೆದು, ತೆಗೆದು ಸಮಾಜದ ಮುಂದಿಟ್ಟಿದೆ. ನೂರಾರು ಹೆಂಗಳೆಯರು ಕರೆ ಮಾಡಿ, ನಮನ್ನು ಹಾರೈಸಿ, ಕಣ್ಣೀರು ಹಾಕಿ ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ನೊಂದ ಬಾಲಕಿಯರು ತಮ್ಮಂತೇಯೇ ಬಹಳಷ್ಟು ಮಕ್ಕಳಿಗೆ ಈ ದುರ್ಗತಿಯಾಗಿರುವುದನ್ನು ಹೇಳಿಕೊಂಡಿರುತ್ತಾರೆ. ಹಾಗಾಗಿ ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ‘ಜನೋತ್ಸವ ಕಾರ್ಯಕ್ರಮ’ದ ಹೆಸರು ‘ಜನಸ್ಪಂದನ’ವಾಗಿ ಬದಲು: ಸೆ.10ರ ‘ಶನಿವಾರ’ದಂದು ಕಾರ್ಯಕ್ರಮ ಫಿಕ್ಸ್
ಆತ್ಮೀಯರೇ, ಈ ಪ್ರಕರಣಕ್ಕೆ ಮಿಡಿದು ರಾಜ್ಯ ಹಾಗೂ ದೇಶದ ಬಹಳಷ್ಟು ಮಾನವೀಯ ಮನಸುಗಳು ಹಾಗೂ ನಿಜವಾದ ಧಾರ್ಮಿಕರು ಸ್ಪಂದಿಸುತ್ತಿದ್ದಾರೆ. ಇದೊಂದು ಸಾಮಾಜಿಕ ಸಾಂಸ್ಕೃತಿಕ ಬದಲಾವಣೆಯನ್ನು ಉಂಟು ಮಾಡಿ, ನಿಜ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪರ್ವಕಾಲ. ಬಲಿಷ್ಠರ ಮುಷ್ಟಿಗೆ ಸಿಕ್ಕಿ ನೊಂದು, ಉಸಿರುಗಟ್ಟಿ ಬದುಕುತ್ತಿರುವ ಎಳೆಯ ಜೀವಿಗಳಿಗೆ ಸಾಂತ್ವನ ಹಾಗೂ ನ್ಯಾಯ ದೊರಕಿಸಲು ಸಕಾಲ ಎಂದಿದ್ದಾರೆ.
ಹಾಗಾಗಿ ನಾವೆಲ್ಲರೂ ಒಟ್ಟಾಗಿ ಒಂದೇ ದ್ವನಿಯಾಗಿ ನಿಲ್ಲಬೇಕಾಗಿದೆ. ನ್ಯಾಯ, ಸತ್ಯ ಹಾಗೂ ಮಕ್ಕಳ ಪರ ನಿಂತ ಸಾರ್ಥಕತೆಯನ್ನು ತಂದುಕೊಳ್ಳಬೇಕಾಗಿದೆ. ಆದುದರಿಂದ ನೊಂದ ಬಾಲಕಿಯರಿಗೆ ಸಾಂತ್ವನ ಹಾಗೂ ಅಭಯ ನೀಡಲು ಹಾಗೂ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹಿಸಲು ರಾಜ್ಯದ ನಾನಾ ಕಡೆಗಳಿಂದ ಪ್ರಜ್ಞಾವಂತ ಜನರು ಸ್ವಯಂ ಪ್ರೇರಿತವಾಗಿ ತಮ್ಮ ಸ್ವಜವಾಬ್ದಾರಿಯಿಂದ ದಿನಾಂಕ 10.10.2022 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗದ ಕನಕ ವೃತದಲ್ಲಿ ಸಮಾವೇಶಗೊಳ್ಳುತ್ತಿರುವ ಸಂದರ್ಭದಲ್ಲಿ ತಾವು ಹಾಗೂ ತಮ್ಮ ಸಂಗಡಿಗರೆಲ್ಲರೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಹರಿದು ಬಂದು ಮಾನವೀಯತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂಬುದು ನಮ್ಮ ಹಂಬಲವಾಗಿದೆ. ದಯಮಾಡಿ ಈ ವಿಚಾರವನ್ನು ಆದಷ್ಟು ಜನರಿಗೆ ತಿಳಿಸಿ. ಮಕ್ಕಳ ಪರವಾದ ಸಾಮಾಜಿಕ ಧ್ವನಿಯೊಂದು ಇತಿಹಾಸದಲ್ಲಿ ದಾಖಲಾಗಲಿ ಎಂದು ತಿಳಿಸಿದ್ದಾರೆ.
ತಮ್ಮ ಮೂಲಕ ಮೌಲ್ಯಾಧಾರಿತ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಳುವಳಿಯೊಂದು ಉದಯಿಸುವಂತಾಗಲಿ. ಅದರ ಯಶಸ್ಸಿನ ಕೃತಾರ್ಥ ಭಾವನೆ ನಮ್ಮೆಲ್ಲರದಾಗಲಿ ಎಂದು ಆಶಿಸುತ್ತಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.