ನವದೆಹಲಿ: ದೇಶದ ವಿವಿಧೆಡೆ ಕಳೆದ ನಿನ್ನೆ, ಐಟಿ ಅಧಿಕಾರಿಗಳು ದಾಳಿ ( IT Officer Raid ) ನಡೆಸಿವೆ. ಈ ಮೂಲಕ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳು ನಡೆಸಿವೆ ಎನ್ನಲಾದ ತೆರಿಗೆ ವಂಚನೆ, ಅಕ್ರಮ ದೇಣಿಗೆ ಸ್ವೀಕಾರ ಹಾಗೂ ಅವುಗಳ ಶಂಕಾಸ್ಪದ ಹಣಕಾಸು ವ್ಯವಹಾರಗಳ ವಿರುದ್ಧ ಬಿಗ್ ಶಾಕ್ ನೀಡಿದೆ.
BIG NEWS: ಐಟಿ ಕಂಪನಿಗಳಿಗೆ ಸರ್ಕಾರದ ಅಭಯ: ಮುಂದಿನ ಮಳೆಗಾಲಕ್ಕೆ ಸಮಸ್ಯೆ ಪರಿಹಾರ
ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಛತ್ತೀಸ್ ಗಡ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಮೂಲಕ ಮಾನ್ಯತೆ ಪಡೆಯದ ಪಕ್ಷಗಳು ಹಾಗೂ ಈ ಪಕ್ಷಗಳ ಪೋಷಕರ ಆದಾಯದ ಮೂಲ, ಖರ್ಚು ಹಾಗೂ ವ್ಯವಹಾರದ ಮೇಲೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಇಂಧನ ಸಚಿವ ಸುನೀಲ್ ಕುಮಾರ್ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ಧಾಳಿ
ಅಂದಹಾಗೇ ಕೇಂದ್ರೀಯ ಚುನಾವಣಆ ಆಯೋಗ 198 ಪಕ್ಷಗಳ ಮಾನ್ಯತೆಯನ್ನು ಇತ್ತೀಚಿಗೆ ರದ್ದುಗೊಳಿಸಿತ್ತು. ಯಾಕೆಂದ್ರ ಆ ಪಕ್ಷಗಳು ನೀಡಿದ್ದಂತ ವಿಳಾಸದಲ್ಲಿ ವಾಸ್ತವವಾಗಿ ಪಕ್ಷದ ಕಚೇರಿಯೇ ಇರಲಿಲ್ಲ. ಜೊತೆಗೆ ಅವು ಅಕ್ರಮ ಹಣಕಾಸು ವ್ಯವಹಾರ ಮಾಡುತ್ತಿದ್ದವು. ಅಲ್ಲದೇ ತನಿಖೆ ಅಗತ್ಯ ಕೂಡ ಇದೆ ಎಂದು ಶಿಫಾರಸ್ಸು ಮಾಡಿತ್ತು. ಈ ಹಿನ್ನಲೆಯಲ್ಲಿಯೇ ಐಟಿ ಅಧಿಕಾರಿಗಳು ದಾಳಿ ನಡೆಸಿ ಬಿಗ್ ಶಾಕ್ ನೀಡಿವೆ.