ಕೊಲ್ಹಾಪುರ : ಕೊಲ್ಹಾಪುರದ ಗಣಪತಿ ವಿಸರ್ಜನೆಗೆ ಕನ್ವೇಯರ್ ಬೆಲ್ಟ್ ತಂತ್ರಜ್ಞಾನವನ್ನ ಬಳಸಲಾಯಿತು. ಇದರ ವೀಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಈ ಕ್ರಮವನ್ನ ಪ್ರಶಂಸಿಸಲಾಯಿತು.
ಭಾರತೀಯ ರಾಜಕಾರಣಿ ಮತ್ತು ಕಂಕವ್ಲಿ ವಿಧಾನಸಭಾ ಕ್ಷೇತ್ರದ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯ ನಿತೇಶ್ ರಾಣೆ ಮತ್ತೊಂದು ವೀಡಿಯೊವನ್ನ ಹಂಚಿಕೊಂಡಿದ್ದಾರೆ, ಇದರಲ್ಲಿ ಜನರು ಕನ್ವೇಯರ್ ಬೆಲ್ಟ್ ತಂತ್ರಜ್ಞಾನವನ್ನ ಬಳಸುವ ಬದಲು ಗಣೇಶ ವಿಗ್ರಹಗಳನ್ನು ನೀರಿನಲ್ಲಿ ಎಸೆಯುವುದನ್ನ ಕಾಣಬಹುದು.
ಈ ವೀಡಿಯೊವನ್ನು ಹಂಚಿಕೊಂಡು ಮರಾಠಿಯಲ್ಲಿ ಟ್ವೀಟ್ ಮಾಡಿರುವ ಅವ್ರು “ಇದು ವಿಸರ್ಜನೆ ಅಲ್ಲ. ನಮ್ಮ ದೇವರನ್ನ ಅವಮಾನಿಸುವ ಹಕ್ಕನ್ನ ಕೊಲ್ಹಾಪುರ ಆಡಳಿತಕ್ಕೆ ಕೊಟ್ಟವರು ಯಾರು?” ಎಂದು ಪ್ರಶ್ನಿಸಿದ್ದಾರೆ.
ವೈರಲ್ ವಿಡಿಯೋ ನೋಡಿ.!
याला विसर्जन म्हणताच नाही !!!
कोल्हापुर प्रशासनाला आमच्या देवाचा अपमान करण्याचा अधिकार कोणी दिला??? pic.twitter.com/V5aYBmx95A— nitesh rane (@NiteshNRane) September 7, 2022
ವರದಿಗಳ ಪ್ರಕಾರ, ಕೊಲ್ಹಾಪುರದ ಕಾಂಗ್ರೆಸ್ ನಾಯಕ ಸತೇಜ್ ಡಿ. ಪಾಟೀಲ್ ಅವ್ರು ಹಿಂದಿನ ಎಂವಿಎ ಸರ್ಕಾರದ ಅವಧಿಯಲ್ಲಿ ಗಣೇಶ ವಿಸರ್ಜನೆಗಾಗಿ ಈ ಕನ್ವೇಯರ್ ಬೆಲ್ಟ್ ತಂತ್ರಜ್ಞಾನವನ್ನ ಪರಿಚಯಿಸಿದರು.