ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ( Hiriyur Taluk ) ವಾಣಿ ವಿಲಾಸ ಸಾಗರ ಜಲಾಶಯವು ( Vanivilas Sagar Dam ) ತುಂಬಿ, ಕೆಲ ದಿನಗಳ ಹಿಂದೆ ಕೋಡಿ ಬಿದ್ದಿತ್ತು. ಇದೀಗ ವಿವಿ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ತಾಲೂಕಿನ ರೈತರಲ್ಲಿ ಸಂತಸ ಮನೆ ಮಾಡಿದೆ.
BREAKING NEWS: ನಾಳೆ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ – ಸಿಎಂ ಬೊಮ್ಮಾಯಿ
1933ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಅಣೆಕಟ್ಟು 135.25 ಅಡಿಯನ್ನು ತಲುಪಿತ್ತು. ಆ ನಂತ್ರ 89 ವರ್ಷಗಳ ಬಳಿಕ ಭರ್ತಿಯಾಗಿ ಕೋಡಿ ಬಿದ್ದಿತ್ತು.
ಇದೀಗ ವಿವಿ ಸಾಗರ ಡ್ಯಾಂ 135 ಅಡಿ ತಲುಪೋದಕ್ಕೆ ಕೆಲ ಇಂಚು ಮಾತ್ರವೇ ನೀರು ಭರ್ತಿಗೆ ಬಾಕಿಯಿದೆ. ಜಲಾಶಯ ಭರ್ತಿ ಆಗೋದಕ್ಕೆ ನೀರು ಹೆಚ್ಚಾದ ಕಾರಣ ಡ್ಯಾಂ ನಿಂದ 10957 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಅಂದಹಾಗೇ ಕೆಲ ದಿನಗಳಿಂದ ಮಾರಿಕಣಿವೆ ಡ್ಯಾಂ ಕೋಡಿ ಬಿದ್ದಿತ್ತು. 89 ವರ್ಷಗಳ ನಂತ್ರ ಬಿದ್ದಂತ ಕೋಡಿಯ ನೀರನ್ನು ನೋಡೋದಕ್ಕೆ ಹಿರಿಯೂರು ತಾಲೂಕಿನ ಜನರಲ್ಲದೇ, ಜಿಲ್ಲೆ, ಹೊರ ಜಿಲ್ಲೆಗಳ ಜನರು ಆಗಮಿಸುತ್ತಿದ್ದಾರೆ.