ಚಿಕ್ಕಬಳ್ಳಾಪುರ: ಸಚಿವ ಉಮೇಶ್ ಕತ್ತಿ ನಿಧನದಿಂದ ನಾಳೆ ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಮುಂದೂಡಿಕೆ ಆಗಿದೆ ಎಂದು ಸಚಿವ ಮುನಿರತ್ನ ಸ್ಪಷ್ಟನೆ ನೀಡಿದ್ದಾರೆ. ಇಂದು ಭಾನುವಾರರಂದು ಬಿಜೆಪಿ ಜನೋತ್ಸವ ಮುಂದೂಡಿಕೆ ಆಗಿದೆ.
BIGG NEWS: ಬೆಲ್ಲದ ಬಾಗೇವಾಡಿಯತ್ತ ಹೊರಟ ಉಮೇಶ್ ಕತ್ತಿ ಪಾರ್ಥಿವ ಶರೀರ
ಸಚಿವ ಉಮೇಶ್ ಕತ್ತಿ ನಿಧನಕ್ಕೆ ರಾಜ್ಯದಲ್ಲಿ ಮೂರಿ ದಿನಗಳ ಶೋಕಚರಣೆ ಮಾಡಲಾಗಿದೆ. ಹೀಗಾಗಿ ಯಾವುದೇ ಸರ್ಕಾರಿ ಕಾರ್ಯಕ್ರಮ ಮಾಡುವಂತಿಲ್ಲ. ನಾಳೆ ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಭಾನುವಾರಕ್ಕೆ ಮುಂದೂಡಿಕೆ ಆಗಿದೆ. ಬಿಜೆಪಿ ಹಿರಿಯ ಗಣ್ಯರ ಅಭಿಪ್ರಾಯಗಳನ್ನ ಪಡೆದುಕೊಂಡು ಬಿಜೆಪಿ ಜನೋತ್ಸವ ಮುಂದೂಡಿಕೆ ಆಗಿದೆ. ಈ ಹಿಂದೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಸಾವಿನಿಂದ ಬಿಜೆಪಿ ಜನೋತ್ಸವ ಮುಂದಕ್ಕೆ ಹೋಗಿತ್ತು. ಸೆ. ೮ ರಂದು ನಿಗದಿಯಾಗಿತ್ತು. ಆದರೆ ಸಚಿವ ಉಮೇಶ್ ಕತ್ತಿ ನಿಧನದಿಂದ ಬಿಜೆಪಿ ಜನೋತ್ಸವ ಮುಂದೂಡಿಕೆ ಆಗಿದೆ.