ಬೆಳಗಾವಿ: ಬೆಂಗಳೂರಿನ ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಹೃದಯಾಘಾತಕ್ಕೆ ( Heart Attack ) ಒಳಗಾಗಿ ಸಚಿವ ಉಮೇಶ್ ಕತ್ತಿ ( Minister Umesh Katti ) ನಿಧನರಾಗಿದ್ದರು. ಅವರ ಪಾರ್ಥೀವ ಶರೀರವನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಕೊಂಡೊಯ್ಯಲಾಗಿತ್ತು. ಇದೀಗ ವಿಮಾನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲಪಿದ್ದು, ಅಲ್ಲಿಂದ ಕೆಲವೇ ಕ್ಷಣಗಳಲ್ಲಿ ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ತೆರಳಲಿದೆ.
BREAKING NEWS : ಸ್ವಗ್ರಾಮಕ್ಕೆ ಕತ್ತಿ ಪಾರ್ಥೀವ ಶರೀರ ಏರ್ ಲಿಫ್ಟ್ : ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ಸಂಸ್ಕಾರ
ಅರಣ್ಯ ಸಚಿವ ಉಮೇಶ್ ಕತ್ತಿಯವರು ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ಬಾತ್ ರೂಂ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದರು. ಅವರನ್ನು ಕೂಡಲೇ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅವರನ್ನು ಪರೀಕ್ಷಿಸಿದಂತ ವೈದ್ಯರು ಹೃದಯಾಘಾತಕ್ಕೆ ಒಳಗಾಗಿರೋದಾಗಿ ತಿಳಿಸಿದ್ದರು. ಅಲ್ಲದೇ ತುರ್ತು ನಿಘಾ ಘಟಕದಲ್ಲಿ ಸ್ತಂಭನಗೊಂಡಿದ್ದಂತ ಹೃದಯವನ್ನು ಮರು ಚಾಲನೆಗೊಳಿಸಲು ಪ್ರಯತ್ನಿಸಿದ್ದರು. ಆದ್ರೇ ಅದು ಸಾಧ್ಯವಾಗದೇ ಅವರು ನಿಧರಾಗಿರೋದಾಗಿ ಘೋಷಿಸಿದ್ದರು.
Good News : ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ : ಗೌರವಧನ ಪಾವತಿಸಲು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ
ಇಂದು ಸಚಿವ ಉಮೇಶ್ ಕತ್ತಿಯನ್ನು ಬೆಂಗಳೂರಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟ ಬಳಿಕ, ಬೆಳಗಾವಿ ಜಿಲ್ಲೆಯ ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಬೆಂಗಳೂರಿನ ಹೆಚ್ ಎಎಲ್ ನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಾರ್ಥೀವ ಶರೀರವನ್ನು ತರಲಾಗಿದೆ.
ಚಿಲಿ ದೇಶದ ಅಧ್ಯಕ್ಷರ ಭಾಷಣದ ವೇಳೆ ಸೂಪರ್ ಮ್ಯಾನ್ ವೇಷ ಧರಿಸಿ ಬಾಲಕನ ಚೇಷ್ಟೆ… Video Viral
ಈಗ ವಿಶೇಷ ವಿಮಾನವು ಬೆಳಗಾವಿಯ ಸಾಂಬ್ರಾ ವಿಮಾನ ತಲುಪಿದ್ದು, ಕೆಲವೇ ಕ್ಷಣಗಳಲ್ಲಿ ವಿಶೇಷ ವಿಮಾನದಿಂದ ಸಚಿವ ಉಮೇಶ್ ಕತ್ತಿಯವರ ಪಾರ್ಥೀವ ಶರೀರವನ್ನು ಮೆರವಣಿಗೆ ವಾಹನಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು, ಅಲ್ಲಿಂದ ಉಮೇಶ್ ಕತ್ತಿಯವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಯವರೆಗೆ ಮೆರವಣಿಗೆ ಮೂಲಕ ಸಾಗಿ ಬರಲಿದೆ.