ಬೆಂಗಳೂರು: ನಗರದಲ್ಲಿ ಸುರಿದಂತ ಭಾರೀ ಮಳೆಯಿಂದಾಗಿ ( Bengaluru Heavy Rain ) ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಕೆಲವೆಡೆ ರಸ್ತೆ ಸಂಚಾರ ಕೂಡ ಅಸ್ತವ್ಯಸ್ಥಗೊಂಡಿವೆ. ಟ್ರ್ಯಾಕ್ಟರ್, ಬೋಟ್ ಬಳಸಿ ರಸ್ತೆಗಳಲ್ಲಿ ಸಂಚರಿಸುವಂತೆ ಆಗಿದೆ. ಈ ಹಿನ್ನಲೆಯಲ್ಲಿ ನಾಳೆ ಬೆಂಗಳೂರಿನ ಪೂರ್ವ ತಾಲೂಕಿನ ಶಾಲೆಗಳಿಗೆ ರಜೆ ( School Holiday ) ಘೋಷಣೆ ಮಾಡಲಾಗಿದೆ.
ಈ ಸಂಬಂಧ ಬೆಂಗಳೂರು ದಕ್ಷಿಣ ವಲಯ 4ರ ಬಿಇಒ ಆದೇಶ ಹೊರಡಿಸಿದ್ದು, ಭಾರೀ ಮಳೆಯಿಂದಾಗಿ ನೆರೆ ಪರಿಸ್ಥಿತಿ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಉಂಟಾಗಿದೆ. ಮನೆಯಿಂದ ಹೊರ ಬರಲಾರದಂತ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಪೂರ್ವ ತಾಲೂಕಿನ ಸರ್ಕಾರಿ, ಖಾಸಗಿ ಶಾಲೆಗಳಿಗೆ ನಾಳೆ ರಜೆಯನ್ನು ನೀಡಲಾಗಿದೆ ಎಂದಿದ್ದಾರೆ.
BIG NEWS: ಬೆಂಗಳೂರಿನಲ್ಲಿ ‘ಬೆಸ್ಕಾಂ ನಿರ್ಲಕ್ಷ್ಯ’ದಿಂದ ಯುವತಿ ಮೃತಪಟ್ಟಿಲ್ಲ – BESCOM ಸ್ಪಷ್ಟನೆ
ಅಂದಹಾಗೇ ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವಂತ ಮಳೆಯಿಂದಾಗಿ ಜಲಪ್ರಳಯವೇ ಉಂಟಾಗಿದೆ. ಎಲ್ಲೆಲ್ಲೂ ನೀರು ಕಂಡುಬಂದಿದ್ದು, ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಅನೇಕ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ.
BIG BREAKING NEWS: ‘ಸರ್ಕಾರಿ ಕಾರ್ಯಕ್ರಮ’ಗಳಲ್ಲಿ ‘ಕನ್ನಡ ಬಳಕೆ ಕಡ್ಡಾಯ’ – ‘ರಾಜ್ಯ ಸರ್ಕಾರ’ ಆದೇಶ