ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಧುಮೇಹವು ನಿಧಾನ ವಿಷವಿದ್ದಂತೆ.. ಹೆಚ್ಚು ಅಜಾಗರೂಕತೆ ಮುಳುಗಿಸಿದ್ರೆ, ಜಾಗರೂಕತೆಯು ಕಾಪಾಡುತ್ತೆ. ಇನ್ನು ರಾತ್ರಿಯಲ್ಲಿ, ವಿಶೇಷವಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಏನು ತಿನ್ನಬೇಕು ಎಂಬುದನ್ನ ನೋಡೋಣ.
ಮಧುಮೇಹಕ್ಕೆ ಯಾವುದೇ ಸಂಪೂರ್ಣ ಚಿಕಿತ್ಸೆ ಇಲ್ಲ. ಆದ್ರೆ, ನಿಯಂತ್ರಣ ಸಾಧ್ಯ. ನೀವು ಜಾಗರೂಕರಾಗಿದ್ದಲ್ಲಿ ನೀವು ಅದನ್ನ ಎಷ್ಟು ಸುಲಭವಾಗಿ ನಿಯಂತ್ರಿಸಬಹುದು? ಮಧುಮೇಹವು ಒಂದು ರೋಗವಾಗಿದ್ದು, ನಿರ್ಲಕ್ಷಿಸಿದ್ರೆ, ಅದು ಅಷ್ಟೇ ಅಪಾಯಕಾರಿಯಾಗುತ್ತದೆ. ಇದನ್ನ ಸಕ್ಕರೆ ಕಾಯಿಲೆ ಎಂದೂ ಕರೆಯುತ್ತಾರೆ. ಅದಕ್ಕಾಗಿಯೇ ನಾವು ತಿನ್ನುವ ಆಹಾರದ ಬಗ್ಗೆ ನಾವು ತುಂಬಾನೇ ಜಾಗರೂಕರಾಗಿರಬೇಕು. ಇನ್ನು ಆಹಾರ ಪದ್ಧತಿಯಲ್ಲಿ ಬದಲಾವಣೆಗಳ ಮಾಡಿಕೊಳ್ಳುವ ಮೂಲಕ ಮಧುಮೇಹ ನಿಯಂತ್ರಣ ಸಾಧ್ಯವಿದೆ. ಅದು ಹೇಗಿ.? ಮುಂದೆ ಓದಿ.
ವಿಶೇಷವಾಗಿ ರಾತ್ರಿಯಲ್ಲಿ ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ, ನೀವು ಸಂಪೂರ್ಣ ಕಾಳಜಿ ವಹಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ, ರಾತ್ರಿಯಲ್ಲಿ ಹಗುರವಾದ ಆಹಾರವು ಉತ್ತಮವಾಗಿರುತ್ತದೆ. ರಾತ್ರಿಯಲ್ಲಿ ಕಾರ್ಬೋಹೈಡ್ರೇಟ್ʼಗಳು ಮತ್ತು ಸಿಹಿತಿಂಡಿಗಳನ್ನು ಸೇವಿಸುವುದನ್ನು ತಪ್ಪಿಸಿ. ಮಧುಮೇಹಿಗಳು ರಾತ್ರಿಯಲ್ಲಿ ಸೂಪ್ ಸೇವಿಸುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ. ವಿಶೇಷವಾಗಿ ತರಕಾರಿಗಳಿಂದ ತಯಾರಿಸಿದ ರಸವು ಆರೋಗ್ಯಕರವಾಗಿದೆ. ಇದು ಬೇಗನೆ ಜೀರ್ಣವಾಗಬಹುದು. ರಾತ್ರಿಯ ಊಟದ ಸಮಯದಲ್ಲಿ ನೀವು ಸಾಧ್ಯವಾದಷ್ಟು ಹಸಿ ಸೊಪ್ಪು ತರಕಾರಿಗಳು, ಬೀನ್ಸ್ ಮತ್ತು ತೆಂಗಿನಕಾಯಿಗಳನ್ನ ಮಿಶ್ರಣ ಮಾಡಿ ತಿಂದರೆ ಶಕ್ತಿ ವೃದ್ಧಿಸುವುದ್ರ ಜೊತೆಗೆ ಆರೋಗ್ಯವಾಗಿರ್ಬೋದು.
ಮಧುಮೇಹದಿಂದ ಬಳಲುತ್ತಿರುವ ಜನರು ಓಟ್ಸ್, ರಾಗಿ ಮತ್ತು ಸಿರಿಧಾನ್ಯಗಳಿಂದ ಮಾಡಿದ ರೊಟ್ಟಿಗಳು ಮತ್ತು ಬೇಳೆಕಾಳುಗಳನ್ನ ರಾತ್ರಿಯಲ್ಲಿ ತಿನ್ನಬಹುದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಜೀರ್ಣಾಂಗ ವ್ಯವಸ್ಥೆಯ ಸುಧಾರಣೆಗೆ ಇದು ತುಂಬಾ ಒಳ್ಳೆಯದು. ಯಾವುದೇ ಸಂದರ್ಭದಲ್ಲೂ ರಾತ್ರಿಯಲ್ಲಿ ಸಿಹಿತಿಂಡಿಗಳನ್ನು ತೆಗೆದುಕೊಳ್ಳಬಾರದು. ವಿಶೇಷವಾಗಿ ರಾತ್ರಿಯಲ್ಲಿ ಕರಿದ ಆಹಾರಗಳನ್ನ ಸೇವಿಸಬೇಡಿ.
ರಾತ್ರಿಯಲ್ಲಿ ನಿಮಗೆ ಹಸಿವಾಗದಿದ್ದರೆ, ನೀವು ಏನನ್ನೂ ತಿನ್ನಲು ಬಯಸದಿದ್ದರೂ ಸಹ ದಾಲ್ಚಿನ್ನಿಯೊಂದಿಗೆ ಕುದಿಸಿದ ಒಂದು ಲೋಟ ನೀರನ್ನ ಕುಡಿಯುವುದು ಒಳ್ಳೆಯದು. ದಾಲ್ಚಿನ್ನಿ.. ಮಧುಮೇಹವನ್ನ ನಿಯಂತ್ರಿಸುವಲ್ಲಿ ಅದ್ಭುತ ಕೆಲಸ ಮಾಡುತ್ತದೆ.