ಬೆಂಗಳೂರು: ನಗರದಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ( Ring ) ಎಲ್ಲೆಲ್ಲೂ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ತಗ್ಗು ಪ್ರದೇಶಗಳ ನಿವಾಸಿಗಳಿಗಳ ಬದುಕು ದ್ವೀಪದ ವಾಸವಾಗಿದೆ. ಇನ್ನೂ ನಿನ್ನೆ ಸುರಿದಂತ ಭಾರೀ ಮಳೆಯಿಂದಾಗಿ ಜಲಮಂಡಳಿಗೂ ( BWSSB ) ಜಲದಿಗ್ಭಂದನವನ್ನು ಹಾಕಲಾಗಿದೆ.
ಹೌದು.. ಬೆಂಗಳೂರಿಗೆ ಕಾವೇರಿ ನೀರು ಪಂಪ್ ಮಾಡುವ ಟಿ.ಕೆ ಹಳ್ಳಿಯ ಜಲಮಂಡಳಿಯ ಘಟಕವು ಜಲಾವೃತಗೊಂಡಿದೆ. ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಬಳಿಯ ಬಿಡಬ್ಲ್ಯೂಎಸ್ಎಸ್ ಬಿ ಪಂಪ್ ಹೌಸ್ ಜಲಾವೃತಗೊಂಡಿದೆ.
ಈ KSRTC ಚಾಲಕ, ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ: ನಿಗಮದಿಂದಲೂ ಅಭಿನಂದನೆ
ಜಲರೇಚಕ ಘಟಕದ ಯಂತ್ರಗಳು ನೀರಲ್ಲಿ ಮುಳುಗಿ ಹೋದ ಪರಿಣಾಮ, ಬೆಂಗಳೂರಿಗೆ ನೀರು ಸರಬರಾಜಿನಲ್ಲಿಯೂ ವ್ಯತ್ಯಯ ಉಂಟಾಗಿದೆ. ಕಳೆದ 5 ದಿನಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಜಲ ಮಂಡಳಿಗೆ ಜಲದಿಗ್ಭಂದನದಿಂದ ಆಗಿದೆ.
ರಾತ್ರಿ ತಡವಾಗಿ ‘ಊಟ’ ಮಾಡೋ ಅಭ್ಯಾಸ ಇದ್ಯಾ? ಅಯ್ಯೋ, ಹಾಗಿದ್ರೆ ನೀವು ‘ಅಪಾಯ’ದಲ್ಲಿದ್ದೀರಿ.!
ಇಂದು ಮತ್ತು ನಾಳೆ ಬೆಂಗಳೂರಿನ ಅರ್ಧ ಭಾಗಕ್ಕೆ ಟಿ ಕೆ ಹಳ್ಳಿಯ ಕಾವೇರಿ ನೀರು ಪಂಪ್ ಘಟಕಕ್ಕೆ ಮಳೆ ನೀರು ತುಂಬಿ, ಜಲಾವೃತವಾಗಿದ್ದರಿಂದ ನೀರು ಪೂರೈಕೆ ಬಂದ್ ಆಗಲಿದೆ. ಇದೀಗ ನೀರನ್ನು ಹೊರ ಹಾಕುವಂತ ಕೆಲಸ ಸಾಗಿದ್ದು, ಯಂತ್ರೋಪಕರಣಗಳ ಕಾರ್ಯವನ್ನು ನೋಡಿ ಕಾವೇರಿ ನೀರು ಪೂರೈಕೆ ಮಾಡಲಾಗುತ್ತದೆ. ಇನ್ನೂ ಒಂದೆರಡು ದಿನ ಕಾವೇರಿ ನೀರು ಬಿಡೋದ್ರಲ್ಲಿ ವ್ಯತ್ಯಾಸ ಕೂಡ ಉಂಟಾಗಬಹುದಾಗಿದೆ.
ಕಾಂಗ್ರೆಸ್ಗೆ ಮತ್ತೊಂದು ಬಿಗ್ ಶಾಕ್: ಆಮ್ ಆದ್ಮಿ ಪಾರ್ಟಿಗೆ ಬ್ರಿಜೇಶ್ ಕಾಳಪ್ಪ ಸೇರ್ಪಡೆ