ವ ರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಯ ವಿವಿಧ ಕಡೆಗಳಲ್ಲ ಹಲವು ಪೊಲೀಸ್ ಅಧಿಕಾರಿ/ ಸಿಬ್ಬಂದಿಯವರುಗಳು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲೈಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದು ತಿಳಿದು ಬಂದಿರುತ್ತದೆ. ಅಂತಹವರಿಗೆ ಚಾಮರಾಜನಗರ ಜಿಲ್ಲಾ ಎಸ್ಪಿ ಶಿವಕುಮಾರ್ 2022 ಏಪ್ರಿಲ್ 20 ರಂದು ಅದಿಕೃತ ಜ್ಞಾಪನ ಆದೇಶ ಹೊರಡಿಸಿದ್ದಾರೆ. ಎಸ್ಪಿ ಅವರ ಆದೇಶ ಇದ್ದರೂ ಅದೀನ ಸಿಬ್ಬಂದಿಗಳು ಕ್ಯಾರೆ ಎನ್ನದೆ ನಿಯಮ ಉಲ್ಲಂಘಿಸುತ್ತಿದ್ದಾರೆ. ಬಹುತೇಕ ಕಢೆ ಎಸ್ಪಿ ಕಚೇರಿ ಸಿಬ್ಬಂದಿಗಳು, ಡಿವೈಸ್ಪಿ ಕಚೇರಿ ಸಿಬ್ಬಂದಿಗಳು ಸಿವಿಲ್ ಡ್ರೆಸ್ ಅಲ್ಲಿ ನಿಯಮಗಳನ್ನ ಉಲ್ಲಂಘನೆ ಮಾಡುತ್ತಿದ್ದರೆ ಕೆಲವರು ಸಮವಸ್ತ್ರದಲ್ಲಿಯೆ ಆದೇಶ ಗಾಳಿಗೆ ತೂರುತ್ತಿದ್ದಾರೆ.
ಎಸ್ಪಿ ಅವರ ಆದೇಶವೇನು!?:
ಶಿಸ್ತಿನ ಇಲಾಖೆಯಲ್ಲಿದ್ದುಕೊಂಡು ಸಂಚಾರ ನಿಯಮಗಳನ್ನು ಪರಿಪಾಲಿಸಬೇಕಾಗಿರುವುದು ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ/ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ ಇನ್ನು ಮುಂದೆ ಯಾರೇ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಅವಧಿಯಲ್ಲಾಗಲೀ ಅಥವಾ ಖಾಸಗಿ ಅವಧಿಯಲ್ಲಾಗಲೇ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವ ಸಂದರ್ಭದಲ್ಲಿ ತಪ್ಪದೇ ಹೆಲ್ಮೆಟ್ ಅನ್ನು ದಲಿಸಿರತಕ್ಕದ್ದು ಹಾಗೂ ಹಿಂಬದಿ ಸವಾರನೂ ಸಹ ಹೆಲೈಟ್ ಧರಿಸುವಂತೆ ಕ್ರಮ ಕೈಗೊಳ್ಳತಕ್ಕದ್ದು, ಅಲ್ಲದೇ ಎಲ್ಲಾ ಸಂಚಾರ ನಿಯಮಗಳನ್ನು ತಪ್ಪದೇ ಪರಿಪಾಲಿಸತಕ್ಕದ್ದು ಎಂತಲೂ ಒಂದು ವೇಳೆ ಮೇಲ್ಕಂಡಂತೆ ನೀಡಿರುವ ಸೂಚನೆಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಅಥವಾ ಖಚಿತ ಮಾಹಿತಿ ದೊರೆತಲ್ಲಿ ಅಂತಹವರುಗಳ ವಿರುದ್ಧ ಐ.ಎಂ.ವಿ ಕಾಯ್ದೆಯಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದಲ್ಲದೇ, ಅಶಿಸ್ತಿನ ಸಂಬಂಧ ಸೂಕ್ತ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.ಈ ವಿಷಯವನ್ನು ಅತೀ ಗಂಭೀರವೆಂದು ಪರಿಗಣಿಸುವುದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. *ಚಾಮರಾಜನಗರ ಎಸ್ಪಿ ಆದೇಶಕ್ಕೆ ಸಿಬ್ಬಂದಿಗಳೆ ಕ್ಯಾರೆ ಎನ್ನದಿರುವಾಗ ಬಡಪಾಯಿ ಜನಸಾಮಾನ್ಯರ ಮೇಲೆ ಬ್ರಹ್ಮಾಸ್ತ್ರವೇಕೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.