ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ( Rural Block Congress Committee ) ಪ್ರಧಾನ ಕಾರ್ಯದರ್ಶಿಯಾಗಿ ಈಶ್ವರಗೆರೆ ಗ್ರಾಮದ ( Eshwaragere Village ) ಕಾಂಗ್ರೆಸ್ ಕಾರ್ಯದರ್ಶಿ ಡಿ.ಟಿ ರಾಮಚಂದ್ರಪ್ಪ ( D T Ramachandrappa ) ಅವರನ್ನು ನೇಮಕ ಮಾಡಲಾಗಿದೆ.
Job Alert: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಶೀಘ್ರವೇ ‘900 ಪಿಎಸ್ಐ ನೇಮಕಾತಿ’ಗೆ ಅರ್ಜಿ
ಈ ಕುರಿತು ಹಿರಿಯೂರು ತಾಲೂಕು ( Hiriyur Taluk ) ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದಂತ ಎಂ ಎಸ್ ಈರಲಿಂಗೇಗೌಡ್ರು ನೇಮಕಾತಿ ಆದೇಶ ಹೊರಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ಆದೇಶದ ಮೇರೆಗೆ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದಂತ ಎಂ.ಕೆ ತಾಜ್ ಪೀರ್ ಸೂಚನೆಯಿಂದ, ಮಾಜಿ ಸಚಿವ ಡಿ. ಸುಧಾಕರ್ ಸಲಹೆಯ ಹಿನ್ನಲೆಯಲ್ಲಿ ಹಿರಿಯೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಈಶ್ವರಗೆರೆ ಗ್ರಾಮದ ಚಂದ್ರಣ್ಣ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Asia Cup 2022: ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಬೌಲಿಂಗ್ ಆಯ್ಕೆ
ನಿಮಗೆ ನೀಡಿರುವಂತ ಹಿರಿಯೂರು ತಾಲೂಕು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ( Hiriyur Taluk Rural Block Congress Committee ) ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ, ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಹೀಗೆ ಹಿರಿಯೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದಂತ ಡಿ.ಟಿ ರಾಮಚಂದ್ರಪ್ಪ ಅವರಿಗೆ ಈಶ್ವರಗೆರೆ ಗ್ರಾಮದ ಜನತೆ ಅಭಿನಂದನೆ, ಶುಭಾಶಯಗಳನ್ನು ಕೋರಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ