ಮಧುಗಿರಿ : ನೆರೆಪರಿಹಾರ ಹೆಚ್ಚಿಸುವಂತೆ ಮನವಿ ಮಾಡಿದ ರೈತರಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಉಡಾಫೆ ಉತ್ತರ ನೀಡಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಮಧುಗಿರಿಯಲ್ಲಿ ನೆರೆ ವೀಕ್ಷಣೆಗೆ ಹೋಗಿದ್ದ ವೇಳೆ ರೈತರು ನೆರೆ ಪರಿಹಾರ ಹೆಚ್ಚಿಸುವಂತೆ ಸಚಿವ ಜೆ.ಸಿ.ಮಾಧುಸ್ವಾಮಿಗೆ ಮನವಿ ಮಾಡಿದ್ದಾರೆ. ಈ ವೇಳೆ ಮಾಧುಸ್ವಾಮಿ,ರೈತರಿಗೆ ಸರ್ಕಾರ ಪರಿಹಾರ ಕೊಡಲು ಸಾಧ್ಯವೇ? ರೈತರಿಗೆ ಆಗುವ ಬೆಲೆ ನಷ್ಟವನ್ನು ಸರ್ಕಾರ ತುಂಬಿ ಕೊಡುವುದಿಲ್ಲ. ಬೆಳೆ ನಷ್ಟವಾಗಿ ಲೆಕ್ಕ ಬರೆದುಕೊಂಡು ಪರಿಹಾರ ಕೊಡಲು ಸಾಧ್ಯವೇ?
ಇದರ ಹೆಸರೇ ಪರಿಹಾರ, ರೈತರಿಗೆ ನಷ್ಟವನ್ನಲ್ಲ ತುಂಬಿ ಕೊಡಲ್ಲ. ಆಕಸ್ಮಿಕವಾಗಿ ತೊಂದರೆಯಾದರೆ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.