ಬೆಂಗಳೂರು: ರಾಜ್ಯಾಧ್ಯಂತ ಕೋವಿಡ್ ಪ್ರಕರಣಗಳ ( Covid19 Case ) ಸಂಖ್ಯೆ ಮುಂದುವರೆದಿದೆ. ಇಂದು ಹೊಸದಾಗಿ 941 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂದು ದೃಢಪಟ್ಟಿದೆ. ಸೋಂಕಿನಿಂದಾಗಿ ಓರ್ವ ಸಾವನ್ನಪ್ಪಿದ್ದಾನೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ( Karnataka Health Department ) ಮಾಹಿತಿ ಬಿಡುಗಡೆ ಮಾಡಿದ್ದು, ಬಳ್ಳಾರಿ 13, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 16, ಬೆಂಗಳೂರು ನಗರ 526, ಚಾಮರಾಜನಗರ 24, ಚಿಕ್ಕಮಗಳೂರು 18 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ ಎಂದಿದೆ.
BIG NEWS : ನಾಸಾ ಮಹತ್ವಾಕಾಂಕ್ಷೆಯ ‘Artemis-1’ ಉಡಾವಣೆ ಮತ್ತೆ ಮುಂದೂಡಿಕೆ ; ನಾಸಾ |Artemis moon rocket
ದಕ್ಷಿಣ ಕನ್ನಡ 29, ಹಾಸನ 36, ಕಲಬುರ್ಗಿ 15, ಕೊಡಗು 13, ಮೈಸೂರು 99, ರಾಮನಗರ 35, ಶಿವಮೊಗ್ಗ 24, ಉಡುಪಿ 13 ಸೇರಿದಂತೆ 914 ಮಂದಿಗೆ ಕೊರೋನಾ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 40,54,146ಕ್ಕೆ ಏರಿಕೆಯಾಗಿದೆ ಎಂದಿದೆ.
ಅರವಿಂದ ಲಿಂಬಾವಳಿ ಸಾರ್ವಜನಿಕ ಕ್ಷೇತ್ರದಲ್ಲಿ ಇರಲು ನಾಲಾಯಕ್ – ದಿನೇಶ್ ಗುಂಡೂರಾವ್ ವಾಗ್ಧಾಳಿ
ಇಂದು ಸೋಂಕಿತರಾದಂತ 788 ಸೇರಿದಂತೆ ಇದುವರೆಗೆ 40,08,698 ಜನರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈಗ 5,203 ಸಕ್ರೀಯ ಸೋಂಕಿತರಿದ್ದಾರೆ. ಇಂದು ಸೋಂಕಿನಿಂದಾಗಿ ಚಾಮರಾಜನಗರಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಇದುವರೆಗೆ ಕಿಲ್ಲರ್ ಕೊರೋನಾಗೋ 40203 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.