ಬೆಂಗಳೂರು: ಸಮಸ್ಯೆ ಹೇಳಲು ಶಾಸಕರ ಬಳಿಯಲ್ಲಿ ಬಂದಂತ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ ಹಿನ್ನಲೆಯಲ್ಲಿ, ಅವರ ವಿರುದ್ಧ ಸಂತ್ರಸ್ತ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಮೂಲಕ ಅರವಿಂದ ಲಿಂಬಾವಳಿಗೆ ಈಗ ಸಂಕಷ್ಟ ಎದುರಾದಂತೆ ಆಗಿದೆ.
ಇಂದು ಅರವಿಂದ ಲಿಂಬಾವಳಿ ದರ್ಪಕ್ಕೆ ಒಳಗಾದಂತ ಸಂತ್ರಸ್ತ ಮಹಿಳೆ ರುತ್ ಸಗಾಯ್ ಮೇರಿಯವರು ಮಹಿಳಾ ಆಯೋಗದ ಕಚೇರಿಗೆ ತೆರಳಿ, ಅರವಿಂದ ಲಿಂಬಾವಳಿ ವಿರುದ್ಧ ದೂರು ನೀಡಿದ್ದಾರೆ.
ಈ ವೇಳೆ ಮಾತನಾಡಿದಂತ ಅವರು, ನಮ್ಮ ಮನೆಯ ಗೋಡೆ ಒಡೆದು ಹಾಕಿದ್ದರು. ಆಗ ಬಿಬಿಎಂಪಿ ಕಮಿಷನರ್, ಬಿಜೆಪಿ ನಾಯಕರು ಇದ್ದರು. ನಮ್ಮ ಮನೆ ಗೋಡೆ ಒತ್ತುವರಿಯಾಗಿದೆ ಅಂತ ಡೆಮಾಲಿಷ್ ಮಾಡಿದ್ರು. ನಮ್ಮ ಬಳಿ ದಾಖಲೆಗಳು ಸರಿಯಾಗಿಯೇ ಇದೆ. ಡೆಮಾಲಿಷ್ ಮಾಡುವುದಕ್ಕೂ ಮೊದಲು ನೋಟಿಸ್ ಕೊಡಬೇಕು. ಅದ್ಯಾವುದನ್ನೂ ನೀಡದೆ ಏಕಾಏಕಿ ಡೆಮಾಲಿಷ್ ಮಾಡಿದ್ದಾರೆ. ನಾನು ಶಾಸಕರಿಗೆ ದಾಖಲೆ ತೋರಿಸಲು ಹೋಗಿದ್ದೆ. ಆಗ ಅವರು ನನ್ನಿಂದ ದಾಖಲೆ ಕಿತ್ತುಕೊಂಡರು. ಆ ಬಳಿಕ ಬಾಯಿಗೆ ಬಂದಂತೆ ಬೈದರು ಎಂದರು.
ನಾನು ಮಹಿಳೆ ಸರ್ ಅಂತ ಹೇಳಿದೆ. ಏನು ಮಹಿಳೆ ನಾಚಿಕೆ, ಮಾನ ಮರ್ಯಾದೆ ಇಲ್ವಾ ಅಂತ ಬೈದರು. ನನ್ನ ಮೇಲೆ ಹಲ್ಲೆ ಮಾಡೋಕೆ ಬಂದರು. ಅವರ ಪಕ್ಷದ ಕಾರ್ಯಕರ್ತರಿಗೆ ಏ ಇವಳಿಗೆ ಹೊಡಿರೋ ಅಂತ ಹೇಳಿದರು. ಲೇಡಿ ಪೊಲೀಸರನ್ನ ಕರೆಸಿ ಇವಳನ್ನ ಎಳ್ಕೊಂಡು ಹೋಗಿ ಅಂತಾ ಹೇಳಿದರು. ನನ್ನನ್ನ ಪೊಲೀಸ್ ಸ್ಟೇಷನ್ ಗೂ ಕರೆದುಕೊಂಡು ಹೋದರು. ಆದ್ರೆ ಪೊಲೀಸರು ಕೂಡ ಯಾವುದೇ ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಹೇಳಿದರು.
‘BMTC ಡ್ರೈವರ್ ಕಂ ಕಂಡಕ್ಟರ್’ಗೆ ಕಿರುಕುಳ, ಆತ್ಮಹತ್ಯೆ ಕೇಸ್: RR ನಗರ ಡಿಪೋ ಮ್ಯಾನೇಜರ್ ಸಸ್ಪೆಂಡ್
ನಾವು ಯಾವುದೇ ಒತ್ತುವರಿ ಮಾಡಿಕೊಂಡಿಲ್ಲ. ದಾಖಲೇ ಪ್ರಕಾರವೇ ಕಟ್ಟಡ ನಿರ್ಮಿಸಿದ್ದೇವೆ. ನಿಮ್ಮ ಬಳಿ ಒತ್ತುವರಿಯಾಗಿರುವ ದಾಖಲೆ ಇದ್ದರೆ ಕೊಡಿ ಅಂದಿದ್ದೇನೆ. ಒತ್ತುವರಿ ಮಾಡಿದ್ದರೆ ತೆರವು ಮಾಡ್ತೇನೆ ಅಂತಾನೂ ಹೇಳಿದ್ದೇನೆ. ಆದರೆ ಏಕಾಏಕಿ ಶಾಸಕರು ನನ್ನಿಂದ ದಾಖಲೆಗಳನ್ನು ಕಿತ್ತುಕೊಳ್ಳಲು ಬಂದರು. ಜೊತೆಗೆ ಹೊಡಿರೋ ಅವಳಿಗೆ ಅಂತಾ ಜೊತೆಗಿದ್ದವರಿಗೆ ಹೇಳಿದರು. ಘಟನೆಯ ಕುರಿತು ಮತ್ತೊಮ್ಮೆ ಮಾಧ್ಯಮಗಳ ಎದುರು ಅಳಲುನ್ನು ಮೇರಿ ತೋಡಿಕೊಂಡರು.
ಇನ್ನೂ ನಾನೇನು ರೇಪ್ ಮಾಡಿದ್ದೇನಾ ಎಂಬ ಅರವಿಂದ ಲಿಂಬಾವಳಿ ಹೇಳಿಕೆ ವಿಚಾರವಾಗಿ ಮಾತನಾಡಿದಂತ ಅವರು, ಅರವಿಂದ್ ಲಿಂಬಾವಳಿ ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ನಾನೇನು ರೇಪ್ ಮಾಡಿದ್ದೇನಾ ಅಂತಾ ಹೇಳಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಬಿಜೆಪಿ ನಾಯಕರು ಶಿಸ್ತಿನ ಪಕ್ಷ ಅಂತಾ ಹೇಳುತ್ತಾರೆ. ಇದೇನಾ ಅವರ ಸಂಸ್ಕೃತಿ.? ಒಬ್ಬ ಮಹಿಳೆ ಬಗ್ಗೆ ಹೇಗೆ ಮಾತನ್ನಾಡಬೇಕು ಅನ್ನೋದು ಗೊತ್ತಿಲ್ಲ. ಇವರು ಹೆಣ್ಣಿಗೆ ಗೌರವ ಕೊಡುವುದನ್ನ ಕಲಿತುಕೊಳ್ಳಲಿ. ನಾನು ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆಯುತ್ತೇನೆ ಎಂದರು.