ನವದೆಹಲಿ : ಚೀನಾದ ವ್ಯಕ್ತಿಗಳು ನಿಯಂತ್ರಿಸುವ ಸ್ಮಾರ್ಟ್ಫೋನ್ ಆಧಾರಿತ ಕಾನೂನುಬಾಹಿರ ತ್ವರಿತ ಸಾಲಗಳ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ED) ಆನ್ಲೈನ್ ಪಾವತಿ ಗೇಟ್ವೇಗಳು, ರೇಜರ್ಪೇ, ಪೇಟಿಎಂ ಮತ್ತು ಕ್ಯಾಶ್ಫ್ರೀನಂತಹ ಕಂಪನಿಗಳ ಕಚೇರಿಗಳಲ್ಲಿ ಶೋಧ ನಡೆಸಿದೆ.
“ಸೆಪ್ಟೆಂಬರ್ 2ರಂದು, ಚೀನಾದ ಸಾಲ ಅಪ್ಲಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) 2002ರ ನಿಬಂಧನೆಗಳ ಅಡಿಯಲ್ಲಿ ಬೆಂಗಳೂರಿನ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನ ನಡೆಸಲಾಯಿತು” ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.