ನವದೆಹಲಿ: ಜಗತ್ತು ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ನಡುವೆ ಬೊಜ್ಜು ಹೊಂದಿರುವವರ ಸಂಖ್ಯೆಗಳು ಕಳೆದ ಕೆಲವು ದಶಕಗಳಲ್ಲಿ ಆತಂಕಕಾರಿ ಮಟ್ಟಕ್ಕೆ ಏರಿವೆ ಕಂಡಿದೆ ಎನ್ನಲಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಬೊಜ್ಜು ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಡಬ್ಲ್ಯುಎಚ್ಒ ಅಂದಾಜಿಸಿದೆ. ನಿರ್ದಿಷ್ಟವಾಗಿ ತೂಕ ನಷ್ಟ ಮತ್ತು ಸ್ಥೂಲಕಾಯವನ್ನು ಗುರಿಯಾಗಿಸುವ ವೈದ್ಯಕೀಯ ಆರೈಕೆಯನ್ನು ಒದಗಿಸುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸುತ್ತಿದ್ದರೂ, ರೋಗಿಗಳು ತಮ್ಮ ಸ್ಥಿತಿಯನ್ನು ಹೆಚ್ಚಾಗಿ ತಮ್ಮ ನಿಯಂತ್ರಣದಲ್ಲಿಲ್ಲದ ಅಂಶಗಳಾದ ಜೆನೆಟಿಕ್ಸ್ ಮತ್ತು ಹಾರ್ಮೋನ್ ಅಸಮತೋಲನಕ್ಕೆ ಕಾರಣವೆಂದು ಅಧ್ಯಯನಗಳು ಬಹಿರಂಗಪಡಿಸಿವೆ.
ಡಬ್ಲ್ಯುಎಚ್ಒ ಪ್ರಕಾರ, 2020 ರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕನಿಷ್ಠ 39 ಮಿಲಿಯನ್ ಮಕ್ಕಳು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರು ಎನ್ನಲಾಗಿದೆ.
ಅಧಿಕ ತೂಕ ಮತ್ತು ಸ್ಥೂಲಕಾಯವು ಕಡಿಮೆ ತೂಕಕ್ಕಿಂತ ವಿಶ್ವದಾದ್ಯಂತ ಹೆಚ್ಚಿನ ಸಾವುಗಳಿಗೆ ಸಂಬಂಧಿಸಿದೆಯಂತೆ. ಜಾಗತಿಕವಾಗಿ ಕಡಿಮೆ ತೂಕಕ್ಕಿಂತ ಹೆಚ್ಚು ಜನರು ಸ್ಥೂಲಕಾಯವನ್ನು ಹೊಂದಿದ್ದಾರೆ ಎನ್ನಲಾಗಿದೆ.