ಚಿತ್ರದುರ್ಗ : ಅಪ್ರಾಪ್ತರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು 2 ನೇ ಅಪರ ಜಿಲ್ಲಾ ಕೋರ್ಟ್ ಎದುರು ಶುಕ್ರವಾರ ಹಾಜರುಪಡಿಸಲಾಗಿದ್ದು, ಸೆ. 5 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪೋಕ್ಸೋ ಕಾಯ್ದೆ ಪ್ರಕರಣದಡಿ ಗುರುವಾರ ರಾತ್ರಿ ಮುರುಘಾಶರಣರನ್ನು ಬಂಧಿಸಿದ್ದ ಪೊಲೀಸರು ತಡರಾತ್ರಿ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಜಡ್ಜ್ ಆದೇಶಿಸಿದ್ದರು.
ವಿದ್ಯಾರ್ಥಿಗಳೇ ಗಮನಿಸಿ : KSRTCಯಿಂದ ‘ಬಸ್ ಪಾಸ್’ ಅವಧಿ, ‘ಹೊಸ ಪಾಸ್ ಅರ್ಜಿಗೆ ಸಲ್ಲಿಕೆ’ ದಿನಾಂಕ ವಿಸ್ತರಣೆ
ಮುರುಘಾಮಠದ ಶ್ರೀಗಳ ಬಂಧನದ ಕುರಿತಂತೆ ಪ್ರತಿಕ್ರಿಯೆ ಮಠದ ಪರ ವಕೀಲ ಉಮೇಶ್, ಶ್ರೀಗಳಿಗೆ ಜಾಮೀನು ಕೋರಿ ಇಂದು ಕೋರ್ಟ್ಗೆ ಮತ್ತೆ ಅರ್ಜಿ ಸಲ್ಲಿಸುತ್ತೇವೆ. ನಾವು ನಿನ್ನೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ರದ್ದಾಗಿದೆ. ಇಂದು ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತೇವೆ. ಮುರುಘಾಶ್ರೀಗಳಿಗೆ ಗೆದ್ದು ಬರುವ ವಿಶ್ವಾಸ ಇದೆ ಎಂದು ಅವರು ಹೇಳಿದರು.