ನೋಯ್ಡಾ : ನೋಯ್ಡಾದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದ್ದು, ‘ನಕಲಿ’ ಎಂಬಿಬಿಎಸ್ ಪ್ರಮಾಣಪತ್ರ ಪಡೆದು ಕ್ಲಿನಿಕ್ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನ ಬಂಧಿಸಲಾಗಿದೆ. ಅಸಲಿಗೆ ಚಿಕಿತ್ಸೆಗಾಗಿ ಮಹಿಳೆಯೊಬ್ಬರು ಕ್ಲಿನಿಕ್ʼಗೆ ದಾಖಲಾಗಿದ್ದು, ಆಕೆ ಸಾವನ್ನಪ್ಪಿದ ನಂತ್ರ ಈ ಶಾಕಿಂಗ್ ಸಂಗತಿ ಬಯಲಾಗಿದೆ. ಇನ್ನು ಆರೋಪಿಯನ್ನ ಪ್ರಿಯಾ ರಂಜನ್ ಠಾಕೂರ್ ಎಂದು ಗುರುತಿಸಲಾಗಿದ್ದು, ಸಧ್ಯ ಪೊಲೀಸರ ವಶದಲ್ಲಿದ್ದಾನೆ.
ಲಲಿತಾ ಎಂಬ ಮಹಿಳೆ ಕಳೆದ ಎರಡು ತಿಂಗಳಿನಿಂದ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಅವ್ರ ಕೊನೆಯ ಭೇಟಿ ಆಗಸ್ಟ್ 19ರಂದು ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆ ದಿನ, ಆಕೆ ಕೇಂದ್ರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮತ್ತು ತುರ್ತು ಸೇವೆಗಳ ಕೊರತೆಯಿಂದಾಗಿ ಕೋಮಾಗೆ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತ್ರ ಮಹಿಳೆ ಕುಟುಂಬವು ಆಕೆಯನ್ನ ಬಿಸ್ರಾಖ್ನ ರಿಯಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಿತು, ಅಲ್ಲಿ ಅವರು ಆಗಸ್ಟ್ 26 ರಂದು ನಿಧನಳಾದಳು.
ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ, ಬಿಸ್ರಾಖ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 (ಕೊಲೆಗೆ ಸಮವಲ್ಲದ ತಪ್ಪಿತಸ್ಥ ನರಹತ್ಯೆ) ಮತ್ತು 338 (ಜೀವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ಗಂಭೀರ ಗಾಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಆಧಾರದ ಮೇಲೆ, ಪೊಲೀಸರು ಆಗಸ್ಟ್ 28ರಂದು ಆರೋಪಿಗಳನ್ನು ಬಂಧಿಸಿದರು.
ಆರೋಪಿಯು ಬಿಹಾರದ ಭೂಪೇಂದ್ರ ನಾರಾಯಣ್ ವಿಶ್ವವಿದ್ಯಾಲಯದಿಂದ 2005ರಲ್ಲಿ ಎಂಬಿಬಿಎಸ್ ಪದವಿ ಪಡೆದಿರುವುದಾಗಿ ದಂಪತಿಗೆ ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಂಟ್ರಲ್ ನೋಯ್ಡಾದ ಡಿಸಿಪಿ ರಾಜೇಶ್ ಎಸ್, “ಎಂಬಿಬಿಎಸ್ ಪ್ರಮಾಣಪತ್ರವನ್ನ ಪರಿಶೀಲನೆಗಾಗಿ ಕಳುಹಿಸಿದಾಗ ಇದು ನಕಲಿ ಎಂದು ಕಂಡುಬಂದಿದೆ. ಐಪಿಸಿ ಸೆಕ್ಷನ್ 420 (ವಂಚನೆ / ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆಯನ್ನು ಪ್ರಚೋದಿಸುವುದು), 467 (ಬೆಲೆಬಾಳುವ ಭದ್ರತೆಯ ಫೋರ್ಜರಿ ಇತ್ಯಾದಿ) 468 (ಮೋಸಕ್ಕಾಗಿ ಫೋರ್ಜರಿ) 471 (ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.