ಹಾವೇರಿ: ವಿಶೇಷ ಕೇಂದ್ರಿಯ ನೆರವಿನಡಿ ಇ-ಕಾರ್ಟ್ (E-Cart)ವಾಹನ ಖರೀದಿಗೆ ಸಹಾಯಧನ ಸೌಲಭ್ಯಕ್ಕಾಗಿ ಪರಿಶಿಷ್ಟ ಪಂಗಡದ ನಗರ ಪ್ರದೇಶದ ಅರ್ಹ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇ-ಕಾರ್ಟ್ (E-Cart) ಹಣ್ಣು ಮತ್ತು ತರಕಾರಿ ಮಾರುವ ಎಲೆಕ್ಟ್ರಿಕ್ ವಾಹನ ಖರೀದಿಗೆ ರೂ.1.50 ಲಕ್ಷ ಘಟಕ ವೆಚ್ಚ, ಸರ್ಕಾರದ ಸಹಾಯಧನ ರೂ.1.35 ಲಕ್ಷ ಹಾಗೂ ಹಾಗೂ ರೂ.15 ಸಾವಿರ ಫಲಾನುಭವಿ ವಂತಿಗೆ ಭರಿಸಬೇಕು.
BREAKING NEWS: ‘ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ’ಯ ನಿರ್ದೇಶಕರಾಗಿ ‘ಡಾ.ವಿರುಪಾಕ್ಷಪ್ಪ’ ನೇಮಕ
ಅಭ್ಯರ್ಥಿಗಳು ಹಾವೇರಿ, ಹಿರೇಕೆರೂರು, ಶಿಗ್ಗಾಂವ, ಸವಣೂರು, ಹಾನಗಲ್ ಹಾಗೂ ರಾಣೇಬೆನ್ನೂರ ನಗರ ಪ್ರದೇಶದ ವಾಸಿಗಳಾಗಿರಬೇಕು ಹಾಗೂ 18 ರಿಂದ 45 ವರ್ಷದೊಳಗಿರಬೇಕು. ವಾರ್ಷಿಕ ಆದಾಯ ರೂ.ಎರಡು ಲಕ್ಷದೊಳಗಿರಬೇಕು. ಡ್ರೈವಿಂಗ್ ಲೈಸೆನ್ಸ್ (ಲಘು) ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಸಂಬಂಧಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಅಗತ್ಯ ದಾಖಲೆಗಳೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ 16-09-2022 ರೊಳಗಾಗಿ ಸಲ್ಲಿಸಬೇಕು.
BREAKING NEWS: ‘ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ’ಯ ನಿರ್ದೇಶಕರಾಗಿ ‘ಡಾ.ವಿರುಪಾಕ್ಷಪ್ಪ’ ನೇಮಕ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಕಚೇರಿ ದೂ.08375-249022 ಸಂಪರ್ಕಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.