ಚಿತ್ರದುರ್ಗ: ಇಂದಿನವರೆಗೆ ಮುರುಘಾ ಶರಣರಿಗೆ ಕೋರ್ಟ್ ನ್ಯಾಯಾಂಗ ಬಂಧನವಿಧಿಸಲಾಗಿತ್ತು. ಆದ್ರೇ ಹೃದ್ರೋಗದಿಂದ ಆಸ್ಪತ್ರೆಗೆ ದಾಖಲಾಗಿರುವಂತ ಮುರುಘಾ ಶ್ರೀಗಳನ್ನು ಜೈಲು ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸಿರಲಿಲ್ಲ. ಈ ಹಿನ್ನಲೆಯಲ್ಲಿ ನ್ಯಾಯಾಲಯ ವಿವರಣೆ ಕೇಳಿದ ಕಾರಣ, ಜೈಲು ಅಧೀಕ್ಷಕರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಇಂದು ದೌಡಾಯಿಸಿದ್ದಾರೆ.
ನಿನ್ನೆ ರಾತ್ರಿ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ಪೊಲೀಸರು ಬಂಧಿಸಿದ್ದರು. ಅವರಿಗೆ ಇಂದಿನವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದ್ರೇ ಬೆಳಿಗ್ಗೆ ಮುರುಘಾ ಶ್ರೀಗಳಿಗೆ ಹೃದ್ರೋಗದಿಂದ ಆಸ್ಪತ್ರೆಗೆ ದಾಖಲಾದ ಕಾರಣ, ಇಂದು ಕೋರ್ಟ್ ಗೆ ಜೈಲು ಅಧಿಕಾರಿಗಳು ಹಾಜರುಪಡಿಸಲಾಗಿರಲಿಲ್ಲ.
ಈ ಹಿನ್ನಲೆಯಲ್ಲಿ ಜೈಲು ಅಧಿಕಾರಿಗಳಿಂದ ಚಿತ್ರದುರ್ಗ ಮ್ಯಾಜಿಸ್ಟ್ರೇಟ್ ಕೋರ್ಟ್ ವಿವರಣೆ ಕೇಳಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಜೈಲು ಅಧೀಕ್ಷಕರು ಮುರುಘಾ ಶ್ರೀಗಳ ಆರೋಗ್ಯ ಮಾಹಿತಿ ನೀಡೋದಕ್ಕೆ ಆಗಮಿಸಿದ್ದಾರೆ. ವೈದ್ಯರು ಅವರ ಹೃದ್ರೋಗ ಸಮಸ್ಯೆ ಬಗ್ಗೆ ನೀಡಿದಂತ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಿದ್ದಾರೆ. ಈ ವರದಿಯನ್ನು ಆಧರಿಸಿ, ಕೋರ್ಟ್ ಯಾವ ಆದೇಶ ಹೊರಡಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.