ನವದೆಹಲಿ: ವಿಶ್ವದ ಅತಿ ದೊಡ್ಡ ಕಾಫಿ ಉತ್ಪನ್ನ ಕಂಪನಿ ಸ್ಟಾರ್ಬಕ್ಸ್ಗೆ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ಹೊಸದಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ.
ಈ ಹಿಂದೆ ರೆಕಿಟ್ ಕಂಪನಿಯ ಸಿಇಒ ಲಕ್ಷ್ಮಣ್ ನರಸಿಂಹನ್ ಅವರು ಆಗಿದ್ದರು. ಪೆಪ್ಸಿಕೊವಿನ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿಯೂ ಕೂಡ ಇವರು ಕಾರ್ಯ ನಿರ್ವಹಿಸಿದ್ದರು, ಇದೀಗ ಕಾಫಿ ಉತ್ಪನ್ನ ಕಂಪನಿ ಸ್ಟಾರ್ಬಕ್ಸ್ಗೆ CEO ಆಗಿ ನೇಮಕವಾಗಿದ್ದಾರೆ.
ಅಕ್ಟೋಬರ್ 1 ರಂದು ಲಕ್ಷ್ಮಣ್ ನರಸಿಂಹನ್ ಕಂಪನಿಗೆ ಸೇರಲಿದ್ದು, 2023ರ ಏಪ್ರಿಲ್ನಲ್ಲಿ ಚುಕ್ಕಾಣಿ ಹಿಡಿಯಲಿದ್ದಾರೆ.
ಅಲ್ಲಿಯವರೆಗೆ ಹಂಗಾಮಿ ಸಿಇಒ ಹೋವರ್ಡ್ ಸ್ಕುಲ್ಟ್ಜ್ ಕಂಪನಿಯನ್ನು ಮುನ್ನಡೆಸಲಿದ್ದಾರೆ.ನರಸಿಂಹನ್ ಅವರು ಕಾಫಿಹೌಸ್ ಮತ್ತು ರೋಸ್ಟರ್ ರಿಸರ್ವ್ನ ನಿರ್ದೇಶಕರ ಮಂಡಳಿಯ ಸದಸ್ಯರಾಗಿರುತ್ತಾರೆ ಎಂದು ಸ್ಟಾರ್ಬಕ್ಸ್ ಘೋಷಿಸಿದೆ. ಲಂಡನ್ ನಿಂದ ಅಮೆರಿಕಕ್ಕೆ ಸ್ಥಳಾಂತರಗೊಂಡ ನಂತರ ಅವರು ಸ್ಟಾರ್ ಬಕ್ಸ್ ಗೆ ಸೇರಲಿದ್ದಾರೆ.