ಚಿತ್ರದುರ್ಗ: ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರ ವಿರುದ್ಧ ಪೋಕ್ಸೋ ( POSCO ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇದೀಗ ಪೊಲೀಸರು ಮುರುಘಾಶ್ರೀಗಳಿಗೆ ಲುಕ್ ಔಟ್ ನೋಟಿಸ್ ( Lookout Notice ) ಜಾರಿಗೊಳಿಸಿದ್ದಾರೆ.
BREAKING NEWS : ಮುರುಘಾಮಠದ ಆಡಳಿತಾಧಿಕಾರಿ, ಮಾಜಿ ಶಾಸಕ ‘ಎಸ್.ಕೆ ಬಸವರಾಜನ್ ದಂಪತಿ’ಗೆ ಜಾಮೀನು ಮಂಜೂರು
ಈ ಸಂಬಂಧ ಮುರುಘಾ ಶ್ರೀಗಳಿಗೆ ಪೋಕ್ಸೋ ಕಾಯ್ದೆಯಡಿ ದಾಖಲಾದಂತ ಪ್ರಕರಣ ಸಂಬಂಧ ಡಿವೈಎಸ್ಪಿ ಅನಿಲ್ ಅವರು, ಲುಕ್ ಔಟ್ ನೋಟಿಸ್ ಅನ್ನು ಜಾರಿಗೊಳಿಸಿದ್ದಾರೆ.
ಮತ್ತೊಂದೆಡೆ ಮುರುಘಾ ಶರಣರು ಆಗಸ್ಟ್ 29ರಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿಯೇ ಅವರಿಗೆ ಈಗ ಡಿವೈಎಸ್ಪಿ ಅನಿಲ್ ಅವರು ಲುಕ್ಔಟ್ ನೋಟಿಸ್ ಜಾರಿಗೊಳಿಸಿರೋದಾಗಿ ತಿಳಿದು ಬಂದಿದೆ.
BIGG BREAKING NEWS: ಎಸ್.ಕೆ. ಬಸವರಾಜನ್ ಸ್ಥಾನಕ್ಕೆ ಎಸ್.ಬಿ.ವಸ್ತ್ರದ್ಮಠ್ ನೇಮಕಕ್ಕೆ ನಿರ್ಧಾರ
ಅಂದಹಾಗೇ ಇಬ್ಬರು ಬಾಲಕಿಯರ ಮೇಲೆ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಆರೋಪ ಕೇಳಿ ಬಂದಿತ್ತು. ಈ ಆರೋಪ ಸಂಬಂಧ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
ಮತ್ತೊಂದೆಡೆ ರೇಪ್ ಕೇಸ್ ಆರೋಪದಲ್ಲಿ ಮಾಜಿ ಶಾಸಕ ಎಸ್ ಕೆ ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯಗೆ ಚಿತ್ರದುರ್ಗದ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಜಾಮೀನು ನೀಡಿದೆ. ಜಾಮೀನು ಸಿಕ್ಕ ಬಳಿಕ ಮಾತನಾಡಿದಂತ ಎಸ್ ಕೆ ಬಸವರಾಜನ್ ಇವೆಲ್ಲಾ ಸುಳ್ಳು ಆರೋಪ, ನಾನು ಆ ವಾರ್ಡನ್ ಯಾರು ಅಂತ ನೋಡೇ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.
ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: KSRTC ಬಸ್ ಪಾಸ್ ಅವಧಿ ವಿಸ್ತರಣೆ