ಮಂಡ್ಯ : ಇಂದು ರಾಜ್ಯದಲ್ಲೆಡೆ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಮಂಡ್ಯ ಜಿಲ್ಲೆಯ ಬೀಡಿ ಕಾಲೋನಿಯಲ್ಲಿ ಭಾವೈಕ್ಯತೆಯ ಗಣೇಶ ಪ್ರತಿಷ್ಠಾಪನೆ ಮಾಡಿದ್ದು, ಹಿಂದೂ – ಮುಸ್ಲಿಂ ಧರ್ಮಸಂಘರ್ಷಕ್ಕೆ ಬ್ರೇಕ್ ಹಾಕೋದಕ್ಕೆ ಮುಂದಾಗಿದ್ದಾರೆ.
ಈ ಕಾಲೋನಿಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದ್ದರೂ ಹಿಂದೂಗಳೊಂದಿಗೆ ಸೇರಿಕೊಂಡು ಅದ್ದೂರಿಯಾಗಿ ಮುಸ್ಕಿಮರೇ ಪ್ರಸಾದ ತಯಾರಿಸಿ ಭಕ್ತರಿಗೆ ವಿತರಣೆ ಮಾಡಿದ್ದಾರೆ ಹಿಂದೂಗಳ ನಡುವೆ ಮುಸ್ಲಿಂಮರು ಸೇರಿ ಗಣೇಶ ಪ್ರತಿಷ್ಠಾಪನೆ ಭಾವೈಕ್ಯತೆಯ ಸಾರಿದ್ದಾರೆ.
ಗಣೇಶೋತ್ಸವ ಪ್ರಯುಕ್ತ ಜಿಲ್ಲೆಯಲ್ಲಿ ಮುಸ್ಲಿಮರೇ ಪ್ರಸಾದ ತಯಾರಿಸಿ ಭಕ್ತರಿಗೆ ವಿತರಣೆ ಮಾಡಿದ್ದಾರೆ. ನಾವೆಲ್ಲರೂ ಒಂದೇ ಒಟ್ಟಾಗಿ ಹಬ್ಬ ಆಚರಣೆ ಮಾಡೋದ್ರಿಂದ ಸಂತಸವಾಗಿದೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.