ದಕ್ಷಿಣ ಕನ್ನಡ : ಜಿಲ್ಲೆಗೆ ಸೆ. 2ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ನೀಡಿದ್ದಾರೆ
ಸೆಪ್ಟೆಂಬರ್ 2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದು, ಮೋದಿ ಕಾರ್ಯಕ್ರಮ ಹಾಗೂ ಹಲವೆಡೆ ಗಣೇಶೋತ್ಸವ ಶೋಭಾಯಾತ್ರೆ ನಡೆಯಲಿರುವ ಕಾರಣ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಮಂಗಳೂರಿನ ಅಂಗನವಾಡಿ, ಫ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಸ್ನಾತಕ್ಕೋತ್ತರ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ, ಹಬ್ಬದ ಸಡಗರದಲ್ಲೇ ಮಂಗಳೂರು ನಗರ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇನ್ನೊಂದು ದಿನ ರಜೆ ಸಿಕ್ಕಂತಾಗಿದೆ.