ಬೆಂಗಳೂರು: ಮೈಸೂರು- ಬೆಂಗಳೂರು ದಶಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಆ ರಸ್ತೆಗೆ ಪ್ಲ್ಯಾನಿಂಗ್ ಕೊಟ್ಟವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
BIGG NEWS: ಚಿಕ್ಕಬಳ್ಳಾಪುರದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಸಚಿವ ಸುಧಾಕರ್ ಭೇಟಿ; ರೈತರಿಗೆ ಪರಿಹಾರ ವಿತರಣೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೋಲ್ ಪಕ್ಕಾ ಪ್ಲ್ಯಾನ್ ಹೇಗಿರಬೇಕು ಅಂತ, ಕಾಮನ್ಸೆನ್ಸ್ ಇರಬೇಕು. ಯಾರು ಪ್ಲ್ಯಾನಿಂಗ್ ಮಾಡಿದ್ರು ಅವರಿಗೆ ಅವಾರ್ಡ್ ಕೊಡಬೇಕು ಬರೀ ಟಾರ್ ಹಾಕಿ ದುಡ್ಡು ಇಸ್ಕೊಳ್ಳೋದಷ್ಟೇ ಕೆಲಸವೇ? ರಾಷ್ಟ್ರೀಯ ಹೆದ್ದಾರಿಯಲ್ಲೇ ಹೀಗಾದ್ರೆ ಕಥೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ರಾಮನಗರ, ಚನ್ನಪಟ್ಟಣ, ಕನಕಪುರದ ಭಾಗದಲ್ಲಿ ಮಳೆ ಭಾರಿ ಮಳೆ ಆಗುತ್ತಿದೆ. ಇದರಿಂದ ಹಾನಿ ಉಂಟಾಗಿದೆ. ಈಗಾಗಲೇ ನಾನು ಭೇಟಿ ಮಾಡುವ ಸ್ಥಳಗಳನ್ನ ನಮ್ಮ ಮುಖಂಡರು ಗುರುತಿಸಿದ್ದಾರೆ. ಅಲ್ಲಿ ಹೋಗಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
BIGG NEWS: ಚಿಕ್ಕಬಳ್ಳಾಪುರದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಸಚಿವ ಸುಧಾಕರ್ ಭೇಟಿ; ರೈತರಿಗೆ ಪರಿಹಾರ ವಿತರಣೆ
ಮಳೆಯಿಂದಾಗಿ ಜನರ ಆಸ್ತಿಪಾಸ್ತಿ ಹಾನಿಯಾಗಿರುವುದು ನೋವಿನ ಸಂಗತಿ. ಸರ್ಕಾರ ಅವರ ನೆರವಿಗೆ ಬರಬೇಕು. ಮಳೆಗೆ ನಿಯಂತ್ರಣ ಇಲ್ಲ, ಮಳೆ ಬರಬಾರದು ಅಂತ ನಾನು ಹೇಳಲ್ಲ. ವಿದ್ಯುತ್ ಸಚಿವನಾಗಿ ಕೆಲಸ ಮಾಡಿರುವ ನನಗೆ ಮಳೆ ಎಷ್ಟು ಅವಶ್ಯಕತೆ ಇದೆ ಅಂತಾ ಗೊತ್ತಿದೆ. ಜನರಿಗೆ ಅನುಕೂಲ ಆಗಲಿ ಅಂತಲೇ ಮೇಕೆದಾಟು ಪಾದಯಾತ್ರೆ ಮಾಡಿದ್ದೇವೆ. 12 ಸಾವಿರ ಕೋಟಿ ಅನುದಾನ ಪಂಪ್ ಸೆಟ್ ವಿದ್ಯುತ್ಗೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.