ಉತ್ತರಾಖಂಡ್ ; ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಮಂಗಳವಾರ ಸಿಲಿಂಡರ್ನಿಂದ ಅನಿಲ ಸೋರಿಕೆಯಾದ ಪರಿಣಾಮವಾಗಿ ಅಸ್ವಸ್ಥಗೊಂಡ ನಂತ್ರ 20ಕ್ಕೂ ಹೆಚ್ಚು ಜನರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಧಿಕಾರಿಗಳ ಪ್ರಕಾರ, ರುದ್ರಾಪುರದ ಆಜಾದ್ ನಗರ ಟ್ರಾನ್ಸಿಟ್ ಕ್ಯಾಂಪ್ನಲ್ಲಿ ಸೋರಿಕೆಯು 40-50 ಲೀಟರ್ ಸಾಮರ್ಥ್ಯದ ಸಿಲಿಂಡರ್ಗೆ ಜೋಡಿಸಲಾದ ಮುರಿದ ಪೈಪ್ನಿಂದ ಸೋರಿಕೆ ಸಂಭವಿಸಿದೆ.
ಪೊಲೀಸರೊಂದಿಗೆ, SDRF ಕಾರ್ಯಕರ್ತರು ಸಹ ಸ್ಥಳಕ್ಕೆ ತಲುಪಿದರು ಮತ್ತು ಅನಿಲ ಸೋರಿಕೆಯನ್ನ ನಿಯಂತ್ರಿಸಲು ಪ್ರಯತ್ನಿಸಿದರು.
ಭೀಕರ ದುರಂತವನ್ನ ತಡೆಗಟ್ಟಲು, ರಾಜ್ಯ ವಿಪತ್ತು ಸ್ಪಂದನಾ ಪಡೆ ಕಾರ್ಯಕರ್ತರು ಸಿಲಿಂಡರ್ʼನ್ನ ತಕ್ಷಣವೇ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದರು ಮತ್ತು ಉಸಿರಾಟದ ತೊಂದರೆಯ ಬಗ್ಗೆ ದೂರು ನೀಡಿದವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಹೇಳಿದರು.
ಸಿಲಿಂಡರ್ʼನಲ್ಲಿರುವ ನಿಖರವಾದ ಅನಿಲದ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ಅವ್ರು ಹೇಳಿದರು.
“ಬೆಳಿಗ್ಗೆ 6.30ರ ಸುಮಾರಿಗೆ, ಅನಿಲ ಸೋರಿಕೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು ಮತ್ತು ತಂಡವು 15 ರಿಂದ 20 ನಿಮಿಷಗಳಲ್ಲಿ ಸ್ಥಳವನ್ನು ತಲುಪಿತು. ಅಗ್ನಿಶಾಮಕ ದಳ, ಸಿವಿಲ್ ಪೊಲೀಸರು ಮತ್ತು ನಮ್ಮ ತಂಡವು ಚೀಲಗಳನ್ನ ಹಾಕುವ ಮೂಲಕ ಸೋರಿಕೆಯನ್ನು ಮುಚ್ಚಿದೆ” ಎಂದು ಎಸ್ಡಿಆರ್ಎಫ್ ತಂಡದ ಉಸ್ತುವಾರಿ ಬಲರಾಮ್ ಸಿಂಗ್ ಬಜೇಲಿ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.