ಚಿತ್ರದುರ್ಗ : ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಾದ ಹಿನ್ನೆಲೆ ಇಂದು ವಿವಿಧ ಮಠಾಧೀಶರು ಸೇರಿಕೊಂಡು ಚಿತ್ರದುರ್ಗದ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಮುರುಘಾ ಶ್ರೀಗಳ ಬೆಂಬಲಕ್ಕೆ ಸಾಮೀಜಿ ಸಮೂಹವೇ ಮುಂದಾಗಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಕನಕಪುರ ಮರಳಗವಿ ಮಠದ ಮುಮ್ಮಡಿ ಶಿವರುದ್ರ ಶ್ರೀಗಳು ಮಾತನಾಡಿ ನಾವೆಲ್ಲಾ ಶ್ರೀಗಳ ಬೆಂಬಲಕ್ಕೆ ನಿಂತಿದ್ದೇವೆ. ಸತ್ಯಕ್ಕೆ ಜಯವಾಗಲಿದೆ. ಶ್ರೀಗಳು ಆರೋಪ ಮುಕ್ತಾರಾಗ್ತಾರೆ. ಮುರುಘಾ ಶರಣರ ಪರ 20ಕ್ಕೂ ಹೆಚ್ಚು ಶ್ರೀಗಳು ಇದ್ದಾರೆ. ಮಠದ ಆವರಣದಲ್ಲಿ ಬಹಿರಂಗ ಬೆಂಬಲ ಘೋಷಣೆ ಮಾಡಲಾಗಿದೆ.
ಪಟ್ಟ ಭದ್ರ ಹಿತಾಸಕ್ತಿಗಳಿಂದ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಶ್ರೀಗಳು ಆರೋಪದಿಂದ ಹೊರ ಬರುತ್ತಾರೆ. ನಾವೆಲ್ಲಾ ಶ್ರೀಗಳಿಗೆ ಆತ್ಮಸ್ಥೈರ್ಯ ತುಂಬಿದ್ದೇವೆ. ಉತ್ತರಾಧಿಕಾರಿ ನೇಮಕ ಶ್ರೀಗಳ ಪರಮಾಧಿಕಾರ ಎಂದು ಕನಕಪುರ ಮರಳಗವಿ ಮಠದ ಮುಮ್ಮಡಿ ಶಿವರುದ್ರ ಶ್ರೀಗಳು ತಿಳಿಸಿದ್ದಾರೆ