ಬೆಂಗಳೂರು: ರಾಜ್ಯಾಧ್ಯಂತ ಸಡಗರ ಸಂಭ್ರಮದಿಂದ ಕೊರೋನಾ ( Coronavirus ) ಆತಂಕದ ನಡುವೆಯೂ ಗೌರಿ ಗಣೇಶ ಹಬ್ಬ ( Gowri Ganesha Festival ) ಆಚರಿಸೋದಕ್ಕೆ ಸಿದ್ಧತೆ ನಡೆಸಲಾಗಿದೆ. ಆಗಸ್ಚ್ 31ರಂದು “ಗಣೇಶ ಚತುರ್ಥಿ” ದಿನದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ( Meat Selling ) ಬೆಂಗಳೂರಿನಲ್ಲಿ ನಿಷೇಧ ಮಾಡಲಾಗಿದೆ.
ಈ ಬಗ್ಗೆ ಬಿಬಿಎಂಪಿಯ ( BBMP ) ಪಶುಪಾಲನೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದು, ದಿನಾಂಕ: 31-08-2022 ಬುಧವಾರದಂದು ” ಗಣೇಶ ಚತುರ್ಥಿ” ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.