ಬೆಳಗಾವಿ: ನಗರದ ಜನರಲ್ಲಿ ಆತಂಕ ಮೂಡಿಸಿರುವ ಚಿರತೆಯ ಕಾರ್ಯಾಚರಣೆ ಕಳೆದ 24 ದಿನಗಳಿಂದ ನಡೆಯುತ್ತಿದ್ದರೂ, ಭಯ ಹುಟ್ಟಿಸಿರುವಂತ ಚಿರತೆ ಮಾತ್ರ ಸಿಕ್ಕಿಲ್ಲ. ಹೀಗಾಗಿ ಸಕ್ರೆಬೈಲು ಆನೆ ಬಿಡಾರದ ಎರಡು ಆನೆಗಳು ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಅಧಿಕ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ನಿರತರಾಗಿದ್ದಾರೆ.
BIG NEWS: ದೇಶಾದ್ಯಂತ ಕೋವಿಡ್ ಕೇಸ್ ಹೆಚ್ಚಳ: ಇಂದು 7,591 ಮಂದಿಗೆ ಕೊರೋನಾ ಪಾಸಿಟಿವ್ | India Covid19 Report
24 ದಿನಗಳೇ ಕಳೆದರೂ ಚಿರತೆ ಪತ್ತೆ ಹಚ್ಚಿ ಹಿಡಿಯೋದಕ್ಕೆ ವಿಫಲವಾಗಿರುವಂತ ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿ, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಅಲ್ಲದೇ ಸಚಿವ ಉಮೇಶ್ ಕತ್ತಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸಚಿವ ಉಮೇಶ್ ಕತ್ತಿಯವೇರ, ಸತೀಶ್ ಜಾರಕಿಹೊಳಿ ಸೋಲಿಸ್ತೀವಿ ಎಂದು ಹೇಳ್ತಾ ಇದ್ದೀರಿ. ಆದ್ರೇ ನಿಮ್ಮ ಕೈಯಿಂದ ಚಿರತೆ ಹಿಡಿಯೋದಕ್ಕೆ ಆಗುತ್ತಿಲ್ಲ, ಇನ್ನು ಸತೀಶ್ ಜಾರಕಿಹೊಳಿ ಏನ್ ಸೋಲಿಸುತ್ತೀರಿ. ಮೊದಲು ಚಿರತೆ ಹಿಡಿದು, ಜನರ ಜೀವ ಕಾಪಾಡಿ ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ಆಫ್ರಿಕನ್ ಮಹಿಳೆಯರಿಂದ ಕಿರಿಕ್: ಪೊಲೀಸರ ಮೇಲೆ ಹಲ್ಲೆಗೂ ಯತ್ನ.?