ಮಡಿಕೇರಿ: ನಿನ್ನೆ ಸುರಿದಂತ ಭಾರೀ ಮಳೆಯಿಂದಾಗಿ ಕೊಡಗಿನ ದೇವರಕೊಲ್ಲಿ ಸಮೀಪದಲ್ಲಿ ಎರಡು ಕಡೆ ಭೂ ಕುಸಿತ ಉಂಟಾಗಿದೆ. ಈ ಹಿನ್ನಲೆಯಲ್ಲಿ ಮಡಿಕೇರಿ-ಮಂಗಳೂರು ಹೆದ್ದಾರಿಯ ಸಂಚಾರದಲ್ಲಿ ಅಸ್ತವ್ಯಸ್ಥ ಉಂಟಾಗಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡುವಂತೆ ಆಗಿತ್ತು.
BBMP ವ್ಯಾಪ್ತಿಯ ‘ಪ್ರಾಥಮಿಕ ಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಮಕ್ಕಳಿಗೆ ‘ಸಂಜೆ ಉಚಿತ ಟ್ಯೂಷನ್’
ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ನಿನ್ನೆ ಸುರಿದಂತ ಭಾರೀ ಮಳೆಯಿಂದಾಗಿ ದೇವರಕೊಲ್ಲಿ ಸಮೀಪದಲ್ಲಿ ಭೂ ಕುಸಿತ ಉಂಟಾಗಿದೆ. ಮಣ್ಣಿನೊಂದಿಗೆ ಮರಗಳು ರಸ್ತೆ ಮೇಲೆ ಜಾರಿ ಬಿದ್ದ ಪರಿಣಾಮ, ಮರ ತೆರವುಗೊಳಿಸೋ ಕಾರ್ಯ ನಡೆಸಲಾಯಿತು. ಇದಕ್ಕೆ ಪ್ರಯಾಣಿಕರು ಕೂಡ ಸಾಥ್ ನೀಡಿದರು.
ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್: ಇನ್ಮುಂದೆ ರಸ್ತೆಗಳಲ್ಲಿ ನಿಲ್ಲಿಸೋ ಎಲ್ಲಾ ವಾಹನಗಳಿಗೆ ಶುಲ್ಕ
ಕೊಡಗಿನ ದೇವರಕೊಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗಳಲ್ಲಿ ಭೂಕುಸಿತದ ಪರಿಣಾಮ, ಹೆದ್ದಾರಿಯ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಲ್ಲದೇ ರಸ್ತೆ ಸಂಚಾರ ಬಂದ್ ಆದ ಕಾರಣ, ವಾಹನಗಳು ಸಾಲುಗಟ್ಟಿ ನಿಂತು, ಟ್ರಾಫಿಕ್ ಜಾಮ್ ಉಂಟಾಗಿ, ಕೆಲ ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕುವಂತೆ ಆಯಿತು.