ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಂಗಳೂರು ಗಣೇಶೋತ್ಸವ ಸಮಿತಿ ಸಹಯೋಗದಲ್ಲಿ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಒಂದೇ ಸೂರಿನಡಿ 3,308 ಜನರು ಗಣೇಶ ಮೂರ್ತಿಯನ್ನು ( Ganesh Statue ) ತಯಾರಿಸಿದರು. ಈ ಮೂಲಕ ಗಿನ್ನಿಸ್ ದಾಖಲೆಯನ್ನು ಸೃಷ್ಠಿ ಮಾಡಲಾಗಿದೆ.
ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ‘ಗೌರಿ-ಗಣೇಶ ಹಬ್ಬ’ಕ್ಕೆ ಭರ್ಜರಿ ಗಿಫ್ಟ್: ‘ಸಖಿ ಭಾಗ್ಯ’ ಯೋಜನೆ ಜಾರಿ
ಹೌದು.. ರಾಸಾಯನಿಕ ಬಣ್ಣಲೇಪಿತ ಗಣೇಶ ಮೂರ್ತಿಗಳ ಬದಲಾಗಿ, ಪರಿಸರ ಸ್ನೇಹಿತ ಗಣೇಶ ಮೂರ್ತಿ ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸೋ ನಿಟ್ಟಿನಲ್ಲಿ, ಒಂದೇ ಸೂರಿನಡಿ 10 ಸಾವಿರ ಗಣೇಶ ಮೂರ್ತಿ ತಯಾರಿಸೋದಕ್ಕೆ ಕೆ ಎಸ್ ಪಿಸಿಬಿ ಉದ್ದೇಶಿಸಿತ್ತು. ಹೀಗೆ ಆಯೋಜಿಸಿದ್ದಂತ ಸ್ಪರ್ಧೆಯಲ್ಲಿ 3,308 ಸ್ಪರ್ಧಿಗಳು ಪಾಲ್ಗೊಂಡು, ಪರಿಸರ ಸ್ನೇಹಿ ಗಣೇಶಮೂರ್ತಿಯನ್ನು ತಯಾರಿಸೋ ಮೂಲಕ, ಗಿನ್ನಿಸ್ ದಾಖಲೆಯನ್ನು ಬರೆದಿದ್ದಾರೆ.
ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್: ಇನ್ಮುಂದೆ ರಸ್ತೆಗಳಲ್ಲಿ ನಿಲ್ಲಿಸೋ ಎಲ್ಲಾ ವಾಹನಗಳಿಗೆ ಶುಲ್ಕ
ಅಂದಹಾಗೇ ಹೀಗೆ ಗಣೇಶ ಮೂರ್ತಿ ತಯಾರಿಕೆಯಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕರು ಉಚಿತವಾಗಿ ನೋಂದಾಯಿಸಿಕೊಂಡು ಭಾಗಿಯಾಗಿದ್ದರು. ಇವರಿಗೆ ನುರಿತ ಕಲಾವಿದರು ಗಣೇಶ ಮೂರ್ತಿ ತಯಾರಿಸುವ ಬಗ್ಗೆ ಹೇಳಿಕೊಟ್ಟರು.
BBMP ವ್ಯಾಪ್ತಿಯ ‘ಪ್ರಾಥಮಿಕ ಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಮಕ್ಕಳಿಗೆ ‘ಸಂಜೆ ಉಚಿತ ಟ್ಯೂಷನ್’