ನವದೆಹಲಿ: ನೋಯ್ಡಾದ ಸೆಕ್ಟರ್ 93 ಎ ನಲ್ಲಿರುವ ಸೂಪರ್ ಟೆಕ್ ಟ್ವಿನ್ ಟವರ್ ( Supertech Twin Tower in Noida ) ಭಾನುವಾರ ಮಧ್ಯಾಹ್ನ ಮೋಡದ ಧೂಳಿನ ನಡುವೆ ನೆಲಸಮಗೊಂಡಿದೆ. ಭ್ರಷ್ಟಾಚಾರದಿಂದ ಹೊರಹೊಮ್ಮಿದ 100 ಮೀಟರ್ ಎತ್ತರದ ಗಗನಚುಂಬಿ ಕಟ್ಟಡವನ್ನು ಜಲಪಾತದ ಇಂಪ್ಲೋಷನ್ ತಂತ್ರವನ್ನು ಬಳಸಿಕೊಂಡು ಜಸ್ಟ್ 9 ಸೆಕೆಂಡ್ ನಲ್ಲಿ ನೆಲಸಮಗೊಳಿಸಲಾಯಿತು. ಇದು ದೇಶದಲ್ಲಿ ಸ್ಫೋಟಿಸಲಾದ ಅತ್ಯಂತ ಎತ್ತರದ ರಚನೆಯಾಗಿದೆ.
ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದ್ದಂತ ನೋಯ್ಡಾದ ಟ್ವಿನ್ ಟವರ್ ಅನ್ನು, ಇಂದು ಸುಪ್ರೀಂ ಕೋರ್ಟ್ ( Supreme Court ) ಆದೇಶದಂತೆ ನೆಲಸಮಗೊಳಿಸಲಾಗಿದೆ. ಇದು ಕುತುಬ್ ಮಿನಾರ್ ಗಿಂತ ಎತ್ತರವಾದ ಅವಳಿ ಗೋಪುರವಾಗಿತ್ತು. ಈ ಕಟ್ಟಡವನ್ನು 3,700 ಕಿಲೋಗ್ರಾಂಗಳಷ್ಟು ಎಕ್ಸ್ಲೋಸಿವ್ಸ್ ಪ್ಲಾಂಟ್ ಬಳಸಿ ಇಂದು ನೆಲಸಮ ಮಾಡಲಾಯಿತು.
ಟ್ವಿನ್ ಟವರ್ ( Noida Twin Tower Demolition ) ಧ್ವಂಸದ ನಂತ್ರ ಉಂಟಾದಂತ ಧೂಳನ್ನು ನಿಯಂತ್ರಿಸಲು ವಿವಿಧ ಸ್ಥಳಗಳಲ್ಲಿ ನೀರಿನ ಟ್ಯಾಂಕರ್ ಗಳನ್ನು ಸ್ಥಾಪಿಸಲಾಯಿತು. ಧೂಳನ್ನು ಸ್ವಚ್ಛಗೊಳಿಸಲು ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಯಂತ್ರಗಳು ನಿರತವಾಗಿದ್ದಾವೆ.
#WATCH | Once taller than Qutub Minar, Noida Supertech twin towers, reduced to rubble pic.twitter.com/vlTgt4D4a3
— ANI (@ANI) August 28, 2022