ರಾಯಚೂರು : ಕಲ್ಯಾಣ ಕರ್ನಾಟಕದ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕಲ್ಯಾಣ ಕರ್ನಾಟಕದ ಜನ ಗುಳೆ ಹೋಗುವುದನ್ನು ತಡೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ರಾಯಚೂರು, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಜೀನ್ಸ್ ಮತ್ತು ಮೆಗಾ ಟೆಕ್ಸ್ ಟೈಲ್ ಪರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು, ರಾಜ್ಯದಿಂದಲೂ ಗಾರ್ಮೆಂಟ್ಸ್ ಉದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ವಿವಾದಕ್ಕೆ ಕಾರಣವಾಗಿದೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಈ ಹೇಳಿಕೆ
ಕಲ್ಯಾಣ ಕರ್ನಾಟಕ ಅರೆ ಒಣ ಪ್ರದೇಶ. ಜಾಹೀರಾಬಾದಿನಲ್ಲಿರುವ ಕೃಷಿ ಸಂಸ್ಥೆಯಲ್ಲಿ 108 ವರ್ಷದ ಜೋಳ, ನವಣೆ, ಸಾಮೆಗಳನ್ನು ಸಂರಕ್ಷಣೆ ಮಾಡಿದ್ದು, ರೈತರು ಹೇಗೆ ಬೆಳೆಯಬೇಕೆಂದು ತರಬೇತಿಯನ್ನು ನೀಡುತ್ತಾರೆ. ಇಂಥ 8 ಸಂಸ್ಥೆಗಳು ಜಗತ್ತಿನಲ್ಲಿದ್ದು, ಈ ಪೈಕಿ ಜಾಹೀರಾಬಾದಿನಲ್ಲಿದೆ. ಇಲ್ಲಿನ ಹವಾಮಾನಕ್ಕೆ ತಕ್ಕ ಬೆಳೆಗಳನ್ನು ಬೆಳೆಯಬೇಕು. ಇದಕ್ಕೆ ವಿಶೇಷ ಮಾರುಕಟ್ಟೆ ನಿರ್ಮಾಣ ಮಾಡುವುದು ಸರ್ಕಾರದ ಸಂಘ ಸಂಸ್ಥೆಗಳ ಕರ್ತವ್ಯ. ಮಾರುಕಟ್ಟೆ ನಿರ್ಮಾಣ ಮಾಡಲು ವಿಶೇಷ ಗಮನ ನೀಡಬೇಕು. ಮಾರುಕಟ್ಟೆಗೆ ಸಂಸ್ಕರಣಾ ಘಟಕಗಳು ಅಗತ್ಯವಿದೆ. ರಾಗಿ, ಸಾಮೆ, ನವಣೆ, ಬರಗು, ಉದುಲು, ಹಾರಕ, ಕೊರ್ಲ ಎಂಬ ಏಳು ಸಿರಿಧಾನ್ಯಗಳನ್ನು ಬೆಳೆಯುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ 7 ಜಿಲ್ಲೆಗಳಿವೆ. ಏಳು ಜಿಲ್ಲೆಗಳಲ್ಲಿ 7 ಸಿರಿಧಾನ್ಯಗಳನ್ನು ನಾವು ಬೆಳೆಸಬೇಕು. ಅದರ ಉತ್ಪಾದನೆ, ಇಳುವರಿ ಹೆಚ್ಚು ಮಾಡಿ ಗುಣಮಟ್ಟ ವನ್ನು ಸುಧಾರಿಸಬೇಕು. ರಾಯಚೂರು ಕರ್ನಾಟಕದ ಪ್ರಮುಖ ಸ್ಥಳ. ಇದರ ಸಮಗ್ರ ಅಭಿವೃದ್ಧಿ ಕೃಷಿಗೆ ನೇರವಾದ ಸಂಬAಧವಿದೆ. ಬರುವ ತಿಂಗಳಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಹಾಕಲಾಗುವುದು.ಅದರೊಂದಿಗೆ ವಿಶೇಷವಾದ ಕೈಗಾರಿಕಾ ಪಾರ್ಕ್ ಇದೇ ವರ್ಷ ನಿರ್ಮಿಸಲಾಗುವುದು ಎಂದರು.
ಕರ್ನಾಟಕದ ಜವಳಿ ನೀತಿಯಿಂದ ಪ್ರೋತ್ಸಾಹಕಗಳಿರುವ ಜವಳಿ ಪಾರ್ಕ್ ನಿರ್ಮಿಸಲಾಗುವುದು. ರಾಜ್ಯ ಸರ್ಕಾರದ ನೆರವಿನಿಂದ ರಾಯಚೂರಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುವುದು. ಬಳ್ಳಾರಿಯಲ್ಲಿ ಜೀನ್ಸ್ ತಯಾರಿಸುವ ಕಾರ್ಖಾನೆ ಇದೆ. ಉತ್ತಮ ಹತ್ತಿ ಬೆಳೆಯುವ ಕಾಲವಿತ್ತು. ರಫ್ತು ಮಾಡುವಂಥ ಹತ್ತಿ ಬೆಳೆಯಲಾಗುತ್ತಿತ್ತು. ಇದಕ್ಕೆ ಮಾರುಕಟ್ಟೆ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಆ ಕೆಲಸವನ್ನು ಮಾಡುತ್ತೇವೆ ಎಂದರು.