ಕೆಎನ್ಎನ್ಡಿಜಿಟಲ್ ಡೆಸ್ಕ್ : ಎಲ್ಇಡಿ ಬಲ್ಬ್ಗಳನ್ನು ಸಾಮಾನ್ಯವಾಗಿ ಭಾರತದ ಬಹುತೇಕ ಮನೆಗಳಲ್ಲಿ ಬಳಸಲಾಗುತ್ತದೆ. ಎಲ್ಇಡಿ ಬಲ್ಬ್ಗಳು ಕಡಿಮೆ ವಿದ್ಯುತ್ ಬಳಸಿ, ಉತ್ತಮ ಬೆಳಕನ್ನ ನೀಡುತ್ವೆ. ಇನ್ನು ಕರೆಂಟ್ ಹೋದ ತಕ್ಷಣ ಈ ಬಲ್ಬ್ʼಗಳು ಆಫ್ ಆಗುತ್ತವೆ. ಆದ್ರೆ, ಈಗ ವಿದ್ಯುತ್ ಹೋದ ಮೇಲೂ ಗಂಟೆಗಟ್ಟಲೆ ಉರಿಯುವ ಇಂತಹ ಬಲ್ಬ್ʼಗಳು ಮಾರುಕಟ್ಟೆಗೆ ಬಂದಿವೆ. ಅಸಲಿಗೆ, ಇವು ಪುನರ್ಭರ್ತಿ ಮಾಡಬಹುದಾದ ಎಲ್ಇಡಿ ಬಲ್ಬ್ಗಳು. ಇವುಗಳನ್ನ ಇನ್ವರ್ಟರ್ ಬಲ್ಬ್ಗಳು ಎಂದೂ ಕರೆಯುತ್ತಾರೆ. ಇವು ಮಾರುಕಟ್ಟೆಯಲ್ಲಿ ಸಾಕಷ್ಟು ಟ್ರೆಂಡ್ ಆಗಿದ್ದು, ನಾವಿಂದು ನಿಮಗೆ ಅಂತಹ ಬಲ್ಬ್ ಬಗ್ಗೆ ಹೇಳಲಿದ್ದೇವೆ. ಅದರ ಹೆಸರು ಹ್ಯಾಲೊನಿಕ್ಸ್ ಪ್ರೈಮ್ 12W B22 ಇನ್ವರ್ಟರ್ ರೀಚಾರ್ಜ್ಬೇಲ್ ಎಮರ್ಜೆನ್ಸಿ ಲೆಡ್ ಬಲ್ಬ್.
ಹ್ಯಾಲೊನಿಕ್ಸ್ ಪ್ರೈಮ್ 12W B22 ಇನ್ವರ್ಟರ್ ರೀಚಾರ್ಜ್ಬೇಲ್ ಎಮರ್ಜೆನ್ಸಿ ಲೆಡ್ ಬಲ್ಬ್ (Halonix Prime 12W B22 Inverter rechargebale Emergency led Bulb)
ಈ ತುರ್ತು LED ಬಲ್ಬ್ʼಗಳು ಸಧ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೀವಿದನ್ನ ಇ ಕಾಮರ್ಸ್ ಸೈಟ್ Amazonನಿಂದ ಬೇಕಾದ್ರೂ ಖರೀದಿಸ್ಬೋದು. ಇನ್ನು ಇದರ ಬೆಲೆಯ ಬಗ್ಗೆ ಮಾತನಾಡೋದಾದ್ರೆ, ಗ್ರಾಹಕರು ಇದನ್ನ ಕೇವಲ 595 ರೂಗಳಲ್ಲಿ ಖರೀದಿಸಬಹುದು. ಸಾಮಾನ್ಯ ಎಲ್ಇಡಿ ಬಲ್ಬ್ಗೆ ಹೋಲಿಸಿದ್ರೆ, ಇದರ ಬೆಲೆ ಬಹುತೇಕ ದುಪ್ಪಟ್ಟಾಗಿದೆ. ಇನ್ನು ಅವು ಸಾಮಾನ್ಯ ಎಲ್ಇಡಿ ಬಲ್ಬ್ಗಿಂತ ಉತ್ತಮವಾಗಿವೆ. ಇದು ನಿಮಗೆ ಗಂಟೆಗಳ ಕಾಲ ಬೆಳಕನ್ನ ನೀಡುತ್ತದೆ. ಈ ಎಲ್ಇಡಿ ಬಲ್ಬ್ ಎಷ್ಟು ಅದ್ಭುತವಾಗಿದೆ ಎಂದರೆ ವಿದ್ಯುತ್ ಹೋದ ನಂತ್ರವೂ ಸುಮಾರು 4 ಗಂಟೆಗಳ ಕಾಲ ಅದು ಆನ್ ಆಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತುರ್ತು ಸಮಯದಲ್ಲಿ ಅವುಗಳನ್ನ ಬಳಸಬಹುದು. ವಿಶೇಷವೆಂದರೆ ಈ ರೀತಿಯ ಬಲ್ಬ್ಗಳನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅಗತ್ಯವಿಲ್ಲ. ಅವು ತಮ್ಮನ್ನು ತಾವು ಚಾರ್ಜ್ ಮಾಡಿಕೊಳ್ಳುತ್ಲೇ ಇರುತ್ವೆ.
ಪುನರ್ಭರ್ತಿ ಮಾಡಬಹುದಾದ ಎಲ್ಇಡಿ ಬಲ್ಬ್ಗಳ ವೈಶಿಷ್ಟ್ಯಗಳೇನು?
ನಾವು ವೈಶಿಷ್ಟ್ಯಗಳ ಬಗ್ಗೆ ಮಾತನಾಡಿದ್ರೆ, ಈ ಬಲ್ಬ್ ವಿದ್ಯುತ್ ಕಡಿತದ ಸಮಯದಲ್ಲಿ 4 ಗಂಟೆಗಳ ಕಾಲ ನಿರಂತರ ಬೆಳಕಿನ ಬ್ಯಾಕ್ಅಪ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಶಕ್ತಿಯುತವಾದ ಲಿಥಿಯಂ-ಐಯಾನ್ ಬ್ಯಾಟರಿಯನ್ನ ಹೊಂದಿದೆ, ಇದು ಚಾರ್ಜ್ ಮಾಡಲು 8-10 ಗಂಟೆಗಳನ್ನ ತೆಗೆದುಕೊಳ್ಳುತ್ತದೆ. ಇದಲ್ಲದೇ, ತುರ್ತು LED ಬಲ್ಬ್ ಆನ್ ಮಾಡಿದಾಗ ಈ 12W ಇನ್ವರ್ಟರ್ ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ. ಇದನ್ನ ನಿಮ್ಮ ಮನೆ, ಚಿಲ್ಲರೆ ಮಳಿಗೆಗಳು, ಆಸ್ಪತ್ರೆ, ನಿಮ್ಮ ಡ್ರಾಯಿಂಗ್ ರೂಮ್ ಮತ್ತು ಸ್ನಾನಗೃಹದಲ್ಲಿ ಬಳಸಬಹುದು. ಇದರಲ್ಲಿ ನಿಮಗೆ 6 ತಿಂಗಳ ವಾರಂಟಿ ಕೂಡ ಸಿಗುತ್ತದೆ.