ನವದೆಹಲಿ : ನಿಮ್ಮ ಮನೆಯಲ್ಲಿದ್ದಾರಾ? ಅದ್ರಲ್ಲೂ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿದ್ದಾರಾ? ಹಾಗಾದ್ರಿ ಈ ಸುದ್ದಿ ನಿಮಗೆ ಉಪಯುಕ್ತವಾಗಲಿದೆ. ಈ ಯೋಜನೆಯಡಿ ನೀವು ನಿಮ್ಮ ಮಕ್ಕಳ ಹೆಸ್ರಲ್ಲಿ ಖಾತೆ ತೆರೆದಿದ್ದೇ ಆದ್ರೆ, ಪ್ರತಿ ತಿಂಗಳು 2500 ರೂಪಾಯಿ ನಿಮ್ಮ ಕೈ ಸೇರಲಿದೆ.
ಈ ಉಳಿತಾಯ ಯೋಜನೆಯ ಹೆಸರು MIS ಅಂತಾ.. ಇದನ್ನ ಅಂಚೆ ಕಚೇರಿ ನಡೆಸುತ್ತಿದೆ. ಇಲ್ಲಿ ನೀವು ತಿಂಗಳಿಗೊಮ್ಮೆ ಹೂಡಿಕೆ ಮಾಡುವ ಮೂಲಕ ನೀವು ಅದನ್ನ ಬಡ್ಡಿಯ ರೂಪದಲ್ಲಿ ಆದಾಯವಾಗಿ ಬಳಸಬಹುದು. ಇನ್ನು ನೀವು ಈ ವಿಶೇಷ ಖಾತೆಯನ್ನ ತೆರೆದಿದ್ದೇ ಆದ್ರೆ ಪ್ರತಿ ತಿಂಗಳು ಗಳಿಸುವ ಬಡ್ಡಿಯೊಂದಿಗೆ ಮಕ್ಕಳ ಬೋಧನಾ ಶುಲ್ಕವನ್ನ ಪಾವತಿಸ್ಬೋದು ಅಲ್ವಾ.
ಖಾತೆಯನ್ನ ಎಲ್ಲಿ? ಹೇಗೆ? ತೆರೆಯಬೇಕು.!
ಪೋಷಕರು ತಮ್ಮ ಮಕ್ಕಳ ಹೆಸ್ರಲ್ಲಿ ಈ ಯೋಜನೆಯಡಿ ಖಾತೆ ತೆರಯಲು ಇಚ್ಛಿಸಿದ್ದೇ ಆದ್ರೆ, ನೀವು ಪಕ್ಕದ ಅಂಚೆ ಕಛೇರಿಯನ್ನ ಸಂಪರ್ಕಿಸಿ. ಇಲ್ಲಿ ನೀವು ಮಾಸಿಕ ಆದಾಯ ಯೋಜನೆ ಪ್ರಯೋಜನಗಳ ಖಾತೆಯನ್ನ ತೆರೆಯಬಹುದು. ಇದರ ಅಡಿಯಲ್ಲಿ ನೀವು ಕನಿಷ್ಟ 1,000 ರೂಪಾಯಿ ಮತ್ತು ಗರಿಷ್ಠ 4.5 ಲಕ್ಷ ರೂಪಾಯಿ ಠೇವಣಿ ಮಾಡಬಹುದು. ಇನ್ನು ಈ ಯೋಜನೆಯ ಮುಕ್ತಾಯವು 5 ವರ್ಷಗಳಾಗಿದ್ದು, ಇಷ್ಟವಿದ್ರೆ ಅದರ ನಂತರವೂ ನೀವದನ್ನ ಮುಂದುವರಿಸಬಹುದು. ಅಂದ್ಹಾಗೆ, ಪ್ರಸ್ತುತ, ಈ ಯೋಜನೆಯ ಅಡಿಯಲ್ಲಿ ಬಡ್ಡಿ ದರ ಶೇಕಡಾ 6.6 ಆಗಿದೆ.
ಪ್ರತಿ ತಿಂಗಳು 1925 ರೂಪಾಯಿ ಲಭ್ಯ.!
ಈ ಖಾತೆಯ ವಿಶೇಷತೆ ನೀವು ಒಂದು ಅಥವಾ ಮೂರು ವಯಸ್ಕರೊಂದಿಗೆ ಜಂಟಿ ಖಾತೆಯನ್ನ ತೆರೆಯಬಹುದು. ಈ ಖಾತೆಯಲ್ಲಿ 3.50 ಲಕ್ಷ ರೂ.ಗಳನ್ನ ಜಮಾ ಮಾಡಿದ್ರೆ, ಪ್ರಸ್ತುತ ದರದಲ್ಲಿ ಪ್ರತಿ ತಿಂಗಳು 1925 ರೂಪಾಯಿ ನಿಮಗೆ ಲಭಿಸುತ್ತೆ. ಇನ್ನು ಈ ಯೋಜನೆಯಲ್ಲಿ ನೀವು ಗರಿಷ್ಠ ಮಿತಿ 4.5 ಲಕ್ಷಗಳನ್ನ ಠೇವಣಿ ಮಾಡಿದ್ರೆ, ನೀವು ಪ್ರತಿ ತಿಂಗಳು ರೂ.2475 ಬಡ್ಡಿಯನ್ನ ಪಡೆಯುತ್ತೀರಿ.
ಇನ್ನು ನೀವು 2 ಲಕ್ಷ ರೂಪಾಯಿ ಅವ್ರ ಹೆಸರಿನಲ್ಲಿ ಠೇವಣಿ ಮಾಡಿದ್ರೆ, ನಿಮ್ಮ ಬಡ್ಡಿಯು ಪ್ರಸ್ತುತ ಶೇಕಡಾ 6.6 ರ ದರದಲ್ಲಿ ಪ್ರತಿ ತಿಂಗಳು 1100 ರೂ. ಆಗುತ್ತೆ. ಇನ್ನು ಐದು ವರ್ಷಗಳಲ್ಲಿ ಈ ಬಡ್ಡಿ ಒಟ್ಟು 66 ಸಾವಿರ ಆಗುತ್ತೆ. ಕೊನೆಗೆ ನೀವು 2 ಲಕ್ಷಗಳನ್ನ ಹಿಂತಿರುಗಿಸುತ್ತೀರಿ.