ದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ(Siddhu Moose Wala) ನಿಧನರಾಗಿರಬಹುದು. ಆದರೆ, ಅವರ ಹಾಡುಗಳು ಇನ್ನೂ ಜೀವಂತವಾಗಿವೆ. ಹತ್ಯೆಗೀಡಾದ ಗಾಯಕನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ, ಪಾಕ್ ಸೇನೆ ಗಡಿಯಾಚೆ ಹಾಕಿದ್ದ ಮೂಸೆ ವಾಲಾ ಹಾಡಿಗೆ ಇತ್ತ ಭಾರತೀಯ ಸೈನಿಕರು ಮಸ್ತ್ ಸ್ಟೆಪ್ ಹಾಕಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಎಚ್ಜಿಎಸ್ ಧಲಿವಾಲ್ ಅವರು ತಮ್ಮ ಟ್ವಿಟರ್ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಗಡಿಯಾಚೆಯ ಪಾಕಿಸ್ತಾನಿ ಸೈನಿಕರು ಮೂಸ್ ವಾಲಾ ಅವರು ಹಾಡಿದ ಹಾಡನ್ನು ಸ್ಪೀಕರ್ಗಳಲ್ಲಿ ಹಾಕಿದ್ದಾರೆ. ಇದನ್ನು ಕೇಳಿಸಿಕೊಂಡ ಭಾರತೀಯ ಸೇನೆಯ ಸಿಬ್ಬಂದಿಗಳು ನಿಂತಲ್ಲೇ ನೃತ್ಯಮಾಡಲು ಆರಂಭಿಸುವುದನ್ನು ನೋಡಬಹುದು.
Sidhu’s songs playing across the border! bridging the divide! pic.twitter.com/E3cOwpdRvn
— HGS Dhaliwal (@hgsdhaliwalips) August 25, 2022
“ಸಿಧುವಿನ ಹಾಡುಗಳು ಗಡಿಯುದ್ದಕ್ಕೂ ಮೊಳಗುತ್ತಿವೆ ಎಂದು ವಿಡಿಯೋ ಪೋಸ್ಟ್ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ವೀಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ನೆಟಿಜನ್ಗಳು ಸಂತಸ ವ್ಯಕ್ತಪಡಿಸಿದ್ದಾರೆ.