ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ವಿಚಾರದ ಕುರಿತಂತೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದಂತೆ `ಗಣೇಶೋತ್ಸವ’ ಆಚರಣೆಗೆ ಪ್ಲ್ಯಾನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
BIGG NEWS : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ
ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, ಗಣೇಶೋತ್ಸವಕ್ಕೆ ಇನ್ನೂ ಅರ್ಜಿ ಸಲ್ಲಿಸಲು 2 ದಿನ ಅವಕಾಶ ಕೊಡುತ್ತೇವೆ. ಸೂಕ್ತ ಸಮಯದಲ್ಲಿ ಸೂಕ್ತ ಆದೇಶ ನೀಡುತ್ತೇವೆ. ಕಂದಾಯ ಸಚಿವನಾಗಿ ಸೂಕ್ತ ಆದೇಶವನ್ನು ನೀಡುತ್ತೇನೆ. ಈಗಾಗಲೇ ಸಲ್ಲಿಕೆಯಾಗಿದ್ದ ಐದು ಅರ್ಜಿಗಳ ಪೈಕಿ ಮೂರು ಅರ್ಜಿಗಳು ತಿರಸ್ಕೃತವಾಗಿವೆ. ಇನ್ನೂ ಎರಡು ಅರ್ಜಿಗಳು ಉಳಿದಿವೆ. ಉಳಿದಂತೆ ಸ್ಥಳೀಯರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸ್ಥಳೀಯರು ಅರ್ಜಿ ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
BIGG NEWS : ದುಬೈನಿಂದ ಇಂಡಿಗೋ ವಿಮಾನಕ್ಕೆ ʻ ಹುಸಿ ಬಾಂಬ್ ಬೆದರಿಕೆ ಕರೆ ʼ : ಪತ್ತೆಗಾಗಿ ಪೊಲೀಸರಿಂದ ತನಿಖೆ ಆರಂಭ
ಈದ್ಗಾ ಮೈದಾನದಲ್ಲಿ ಸ್ವಾತಂತ್ರೋತ್ಸವ ಹೇಗೆ ಆಚರಣೆ ಮಾಡಿದ್ದೇವೋ ಅದೇ ರೀತಿ ಗಣೇಶೋತ್ಸವ ಆಚರಣೆ ಮಾಡುತ್ತೇವೆ. ಸರ್ಕಾರದ ತೀರ್ಮಾನದಂತೆ ಗೃಹ ಇಲಾಖೆ ಭದ್ರತೆ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
BIG NEWS: ಅ.7 ರಿಂದ ಪ್ರೊ ಕಬಡ್ಡಿ ಲೀಗ್ನ 9ನೇ ಸೀಸನ್ ಆರಂಭ!| Pro Kabaddi Leag
ನಮ್ಮ ಪೊಲೀಸರು ಬಂದೋಬಸ್ತ್ ನೀಡಲು ಸಮರ್ಥವಾಗಿದೆ. ಸ್ವಾತಂತ್ರೋತ್ಸವ ಹೇಗೆ ಮಾಡಿದ್ದೇವೋ ಹಾಗೇ ಗಣೇಶೋತ್ಸವ ಮಾಡುತ್ತೇವೆ. ಗಣೇಶೋತ್ಸವವನ್ನು ಚಾಣಾಕ್ಷತನದಿಂದ ಮಾಡಬೇಕಾಗಿದೆ. ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಮಾಡಲು ಪ್ಲಾನ್ ಮಾಡಲಾಗಿದ್ದು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಎರಡು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.