ಶಿವಮೊಗ್ಗ: ನಾಳೆ ಜಿಲ್ಲೆಯ ಸಾಗರ ತಾಲೂಕಿನ ( Sagar Taluk ) ನಗರ ಪ್ರದೇಶ ವ್ಯಾಪ್ತಿಯಲ್ಲಿ ವಿದ್ಯುತ್ ವಿವಿಧ ಕಾಮಗಾರಿ ಹಿನ್ನಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.
ಈ ಬಗ್ಗೆ ಮೆಸ್ಕಾಂ ನಿಂದ ( MESCOM ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ: 27.08,2022 ರ ಶನಿವಾರದಂದು ಸಾಗರ ನಗರ ಎಫ್-1 ಸಾಗರ ಟೌನ್ ಮತ್ತು ಎಫ್-11 ಎಸ್.ಎನ್.ನಗರ 11ಕೆವಿ ಮಾರ್ಗಗಳ ನಿರ್ವಹಣೆ ಕಾರ್ಯವಿರುವ ಕಾರಣ ಮಂಕಳಲೆ, ಪ್ರಗತಿನಗರ, ಎಲ್.ಬಿ. ನಗರ, ಲೋಹಿಯಾನಗರ, ಕುಗೈ, ಜೋಗರಸ್ತೆ, ಪೋಲಿಸ್ ವಸತಿಗೃಹ ಪವರ್ ಕಟ್ ಆಗಿರಲಿದೆ ಎಂದಿದೆ.
ಇದಲ್ಲದೇ ವಿನೋಬನಗರ, ಬಿ.ಹೆಚ್.ರಸ್ತೆ, ಟಿ.ವಿ.ಎಸ್ ಶೋರೂಂ ಹತ್ತಿರ, ನೆಹರು ನಗರ, ಜನ್ನತ್ ನಗರ, ಮೀನು ಮಾರುಕಟ್ಟೆ, ಇಕ್ಕೇರಿ ರಸ್ತೆ, ಎಸ್.ಎನ್.ನಗರ, ಚಿಪ್ಲಿ, ಆದಿಶಕ್ತಿನಗರ, ವಿಜಯನಗರ, ಗಾಂಧಿನಗರ, ರಾಮನಗರ, ಬಿ.ಕೆ.ರಸ್ತೆ, ಕಂಬಳಿಕೊಪ್ಪ ಸ್ಥಳಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುವುದು. ಆದ್ದರಿಂದ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಎಂದಿನಂತೆ ಸಹಕರಿಸುವಂತೆ ಕೋರಲಾಗಿದೆ
ವರದಿ: ಉಮೇಶ್ ಮೊಗವೀರ, ಸಾಗರ
Good News : ವಿವಿಗಳಲ್ಲಿ ‘ಪ್ರಾಕ್ಟೀಸ್ ಪ್ರೊಫೆಸರ್’ ನೇಮಕಕ್ಕೆ ‘UGC’ ಗ್ರೀನ್ ಸಿಗ್ನಲ್ ; ನೂತನ ಮಾರ್ಗಸೂಚಿ ಪ್ರಕಟ