ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ( Karnataka Public Service Commission – KPSC ) ಕರೆಯಲಾಗಿದ್ದಂತ ಕಿರಿಯ ಸಹಾಯಕ ಕಂ ದ್ವಿತೀಯ ದರ್ಜೆ ಸಹಾಯಕರ ( Second Division Assistant – SDA ) 1,080 ಹುದ್ದೆಗಳ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ( Eligibility list ) ಪ್ರಕಟಿಸಲಾಗಿದೆ.
ಈ ಕುರಿತಂತೆ ಕೆಪಿಎಸ್ಸಿಯಿಂದ ಮಾಹಿತಿ ನೀಡಲಾಗಿದ್ದು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಉಳಿಕೆ ಮೂಲ ವೃಂದದ ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿತ್ತು ಎಂದು ತಿಳಿಸಿದೆ.
1080 ಎಸ್ ಡಿಎ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಳಿಕ, ಈಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಕಟ್ ಆಪ್ ಅಂಕಗಳಂತೆ ಅರ್ಹತೆ ಪಡೆದಂತ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಆಯೋಗದ ಜಾಲತಾಣ https://kpsc.kar.nic.in/ ನಲ್ಲಿ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಪರಿಶೀಲಿಸುವಂತೆ ಹೇಳಿದೆ.
Good News : ವಿವಿಗಳಲ್ಲಿ ‘ಪ್ರಾಕ್ಟೀಸ್ ಪ್ರೊಫೆಸರ್’ ನೇಮಕಕ್ಕೆ ‘UGC’ ಗ್ರೀನ್ ಸಿಗ್ನಲ್ ; ನೂತನ ಮಾರ್ಗಸೂಚಿ ಪ್ರಕಟ