ತುಮಕೂರು: ನಿನ್ನೆ ರಾತ್ರಿ ಸುರಿದಂತ ಭಾರೀ ಮಳೆಯಿಂದ ( Heavy Rain ) ಜಿಲ್ಲೆಯಲ್ಲಿ ಉಂಟಾಗದಂತ ಅನಾಹುತ ವೀಕ್ಷಣೆ ಬಳಿಕ, ಸೇತುವೆಯ ಮೇಲೆ ಸಾಗಿದ ಕೇವಲ ಐದೇ ನಿಮಿಷದಲ್ಲಿ ಆ ಸೇತುವೆ ಕುಸಿದಿದ್ದರಿಂದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ( Farmer DCM Dr G Parameshwar ) ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವಂತ ಘಟನೆ ಇಂದು ನಡೆದಿದೆ.
Crime News: ಬೆಚ್ಚಿಬಿದ್ದ ಬೆಳಗಾವಿ ಜನತೆ: ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿ ರುಂಡ ಕಡಿದ ದುಷ್ಕರ್ಮಿಗಳು
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದಂತ ಭಾರೀ ಮಳೆಯಿಂದ ಉಂಟಾಗಿದ್ದಂತ ನೆರೆ ಪ್ರವಾಹವನ್ನು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಇಂದು ನೋಡೋದಕ್ಕೆ ತೆರಳಿದ್ದರು. ಹೀಗೆ ತೆರಳಿದ್ದಂತ ಅವರು, ನೆರೆ ಪರಿಸ್ಥಿತಿ ವೀಕ್ಷಿಸಿದ ಬಳಿಕ ತೀತಾ-ಗೊರವನಹಳ್ಳಿ ಸೇತುವೆ ಮೇಲೆ ನಿಂತು ಪ್ರವಾಹ ಪರಿಸ್ಥಿತಿಯನ್ನು, ಸೇತುವೆ ಹಾಳಾಗಿರೋ ಬಗ್ಗೆಯೂ ಪರಿಶೀಲನೆ ನಡೆಸಿ, ಅಲ್ಲಿಂದ ತೆರಳಿದ್ದರು.
ಮಾಜಿ ಡಿಸಿಎಂ ಜಿ ಪರಮೇಶ್ವರ್ ತೀತಾ-ಗೊರವನಹಳ್ಳಿ ಸೇತುವೆ ವೀಕ್ಷಣೆಯ ಬಳಿಕ, ತೆರಳಿದಂತ ಐದೇ ನಿಮಿಷದಲ್ಲಿ ಸೇತುವೆ ಭಾರೀ ಮಳೆಯಿಂದಾಗಿ ಕುಸಿತಗೊಂಡಿದೆ. ಜಿ.ಪರಮೇಶ್ವರ್ ಸೇತುವೆಯಿಂದ ಪಾಸ್ ಆಗಿದ್ದರಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಅವರು ಪಾರಾಗಿರುವಂತ ಘಟನೆ ನಡೆದಿದೆ.
BIGG BREAKING NEWS: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ10,256 ಹೊಸ ಪ್ರಕರಣಗಳು ಪತ್ತೆ, 68 ಸಾವು