ಬೆಂಗಳೂರು: ಹಣ ವಸೂಲಿ ಮಾಡಿ ಕೊಡದಿದ್ದರೆ ಸಸ್ಪೆಂಡ್ ಮಾಡುತ್ತೇನೆಂದು ‘ಮನಿ’ರತ್ನ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಸಂಗತಿ ಗುತ್ತಿಗೆದಾರರಿಂದ ಹೊರಬಂದಿದೆ. ಬಸವರಾಜ ಬೊಮ್ಮಾಯಿ ಅವರೇ, ರೌಡಿಸಂ ಮೂಲಕ ಭ್ರಷ್ಟಾಚಾರ ನಡೆಸುತ್ತಿರುವ ಸಚಿವ ಮುನಿರತ್ನರ ರಾಜೀನಾಮೆ ಯಾವಾಗ ಪಡೆಯುವಿರಿ? ತನಿಖೆ ನಡೆಸಿ ತಮ್ಮ ಪಾರದರ್ಶಕತೆ ಯಾವಾಗ ತೋರಿಸುವಿರಿ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಹಣ ವಸೂಲಿ ಮಾಡಿ ಕೊಡದಿದ್ದರೆ ಸಸ್ಪೆಂಡ್ ಮಾಡುತ್ತೇನೆಂದು 'ಮನಿ'ರತ್ನ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಸಂಗತಿ ಗುತ್ತಿಗೆದಾರರಿಂದ ಹೊರಬಂದಿದೆ.@BSBommai ಅವರೇ,
ರೌಡಿಸಂ ಮೂಲಕ ಭ್ರಷ್ಟಾಚಾರ ನಡೆಸುತ್ತಿರುವ ಸಚಿವ ಮುನಿರತ್ನರ ರಾಜೀನಾಮೆ ಯಾವಾಗ ಪಡೆಯುವಿರಿ? ತನಿಖೆ ನಡೆಸಿ ತಮ್ಮ ಪಾರದರ್ಶಕತೆ ಯಾವಾಗ ತೋರಿಸುವಿರಿ?#BJPBrashtotsava— Karnataka Congress (@INCKarnataka) August 24, 2022
ಈ ಬಗ್ಗೆ ಸರಣಿ ಟ್ವಿಟ್ ( Twitter ) ಮಾಡಿದ್ದು, ಸ್ವತಃ ಗುತ್ತಿಗೆದಾರರಾಗಿದ್ದ ಸಚಿವ ‘ಮನಿ’ರತ್ನ ಸಚಿವ ಸ್ಥಾನ ಸಿಕ್ಕಿದ್ದೇ ತಡ ಗುತ್ತಿಗೆದಾರರನ್ನೇ ದೋಚಲು ಶುರು ಮಾಡಿದ್ದಾರೆ, 40% ಕಮಿಷನ್ ಸರ್ಕಾರ ಅಧಿಕಾರಿಗಳನ್ನೇ ವಸೂಲಿಗೆ ಬಳಸಿಕೊಳ್ಳುತ್ತಿದೆ ಎಂದು ಗುತ್ತಿಗೆದಾರರ ಆರೋಪ. ರಾಜ್ಯದಲ್ಲಿ IAS, IPS ಅಧಿಕಾರಿಗಳ ಬಂಧನವಾಗಿದ್ದು ಇದಕ್ಕೆ ಪುಷ್ಠಿ ಕೊಡುತ್ತದೆ ಎಂದು ಹೇಳಿದೆ.
ಸ್ವತಃ ಗುತ್ತಿಗೆದಾರರಾಗಿದ್ದ ಸಚಿವ 'ಮನಿ'ರತ್ನ ಸಚಿವ ಸ್ಥಾನ ಸಿಕ್ಕಿದ್ದೇ ತಡ ಗುತ್ತಿಗೆದಾರರನ್ನೇ ದೋಚಲು ಶುರು ಮಾಡಿದ್ದಾರೆ,
40% ಕಮಿಷನ್ ಸರ್ಕಾರ ಅಧಿಕಾರಿಗಳನ್ನೇ ವಸೂಲಿಗೆ ಬಳಸಿಕೊಳ್ಳುತ್ತಿದೆ ಎಂದು ಗುತ್ತಿಗೆದಾರರ ಆರೋಪ.
ರಾಜ್ಯದಲ್ಲಿ IAS, IPS ಅಧಿಕಾರಿಗಳ ಬಂಧನವಾಗಿದ್ದು ಇದಕ್ಕೆ ಪುಷ್ಠಿ ಕೊಡುತ್ತದೆ.#BJPBrashtotsava
— Karnataka Congress (@INCKarnataka) August 24, 2022
ಬಿಬಿಎಂಪಿ ಗುತ್ತಿಗೆದಾರರ ಕಮಿಷನ್ 40%ರಿಂದ 50% ಏರಿಕೆಯಾಗಿದೆ, ರಸ್ತೆಗುಂಡಿಗಳಿಗೆ ಬಲಿಯಾಗುವವರ ಸಂಖ್ಯೆಯೂ ಏರುತ್ತಿದೆ. ಬೆಂಗಳೂರಿನ ರಸ್ತೆಗಳು ಪರಲೋಕದ ದಾರಿಗಳಾಗಿ ಬದಲಾಗಿರುವುದು #BJPBrashtotsava ದ ಪರಿಣಾಮದಿಂದ. ರಸ್ತೆ ಗುಂಡಿಗೆ ಆಗಿರುವ ಸಾವುಗಳೆಲ್ಲವೂ ಸರ್ಕಾರವೇ ಮಾಡಿದ ಕೊಲೆಯಲ್ಲವೇ, ಪರಿಹಾರ ನೀಡಬೇಕಲ್ಲವೇ ಬಿಜೆಪಿ ಎಂದು ಪ್ರಶ್ನಿಸಿದೆ.
ಬಿಬಿಎಂಪಿ ಗುತ್ತಿಗೆದಾರರ ಕಮಿಷನ್ 40%ರಿಂದ 50% ಏರಿಕೆಯಾಗಿದೆ,
ರಸ್ತೆಗುಂಡಿಗಳಿಗೆ ಬಲಿಯಾಗುವವರ ಸಂಖ್ಯೆಯೂ ಏರುತ್ತಿದೆ.ಬೆಂಗಳೂರಿನ ರಸ್ತೆಗಳು ಪರಲೋಕದ ದಾರಿಗಳಾಗಿ ಬದಲಾಗಿರುವುದು#BJPBrashtotsava ದ ಪರಿಣಾಮದಿಂದ.
ರಸ್ತೆ ಗುಂಡಿಗೆ ಆಗಿರುವ ಸಾವುಗಳೆಲ್ಲವೂ ಸರ್ಕಾರವೇ ಮಾಡಿದ ಕೊಲೆಯಲ್ಲವೇ, ಪರಿಹಾರ ನೀಡಬೇಕಲ್ಲವೇ @BJP4Karnataka? pic.twitter.com/sca2nxuVZ3
— Karnataka Congress (@INCKarnataka) August 24, 2022
ಕಮಿಷನ್ ಕಾಟದಿಂದ ಬೇಸತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಸಿಎಂಗೆ ಪತ್ರ ಬರೆದಿದೆ. ಕಮಿಷನ್ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮಗೆ ಸಂತೋಷ್ ಪಾಟೀಲ್ರಂತೆ ಇನ್ನೆಷ್ಟು ಬಲಿ ಬೇಕು? 40% ಸರ್ಕಾರದ #BJPBrashtotsava ನಿಲ್ಲುವುದು ಯಾವಾಗ? ಎಂದು ಹೇಳಿದೆ.
ಕಮಿಷನ್ ಕಾಟದಿಂದ ಬೇಸತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಸಿಎಂಗೆ ಪತ್ರ ಬರೆದಿದೆ.ಕಮಿಷನ್ ಸರ್ಕಾರದ ಮುಖ್ಯಮಂತ್ರಿ @BSBommai ಅವರೇ, ನಿಮಗೆ ಸಂತೋಷ್ ಪಾಟೀಲ್ರಂತೆ ಇನ್ನೆಷ್ಟು ಬಲಿ ಬೇಕು?
40% ಸರ್ಕಾರದ #BJPBrashtotsava ನಿಲ್ಲುವುದು ಯಾವಾಗ? pic.twitter.com/abVyUlXjrE
— Karnataka Congress (@INCKarnataka) August 24, 2022