ಮೈಸೂರು: ಜಿಲ್ಲೆಯ ಹುಣಸೂರಿನಲ್ಲಿ ಮಾವನೇ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಗೋಕುಲ ರಸ್ತೆ ಎನ್.ಎಸ್ ಕ್ವಾಟ್ರರ್ಸ್ನಲ್ಲಿ ನಡೆದಿದೆ. ಸೊಸೆ ಮೇಲೆ ಮಾವನ ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ
ಎನ್ನಲಾಗಿದೆ. ಈ ಸಂಬಂಧ ಅದನ್ನು ತಡೆಯಲು ಪ್ರಯತ್ನಿಸದ ಪತಿಯ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.ಹುಣಸೂರಿನ ಕಟ್ ನೋಟ್ವ್ಯಾಪಾರಿ ಇಕ್ಬಾಲ್ ಅಹ್ಮದ್, ತಾಲೂಕಿನ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ರಾಸಾಯನ ಶಾಸ್ತ್ರ ಅತಿಥಿ ಉಪನ್ಯಾಸಕ ಹಾಗೂ ಜಮಾತೆ ಇಸ್ಲಾಂ ಹಿಂದ್ ಸಂಘಟನೆಯ ಸಕ್ರಿಯ ಸದಸ್ಯನಾಗಿರುವ ರಶೀದ್ ಅಹ್ಮದ್ ಸೇರಿದಂತೆ 8 ಮಂದಿಯ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾಳೆ.
ಚಿಕ್ಕ ನೇರಳೆ ಗ್ರಾಮದ ಯುವತಿಯ ಜೊತೆಗೆ ರಶೀದ್ ಅಹ್ಮದ್ ಮದುವೆಯಾಗಿತ್ತು. ನಂತರ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಇದೀಗ ಅತ್ಯಾಚಾರಕ್ಕೆ ಪ್ರಯತ್ನ ನಡೆಸಲಾಗಿದ್ದು, ಸಹಕರಿಸದ ಹಿನ್ನೆಲೆ ದೈಹಿಕ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.