ಬೆಂಗಳೂರು: ಕೆಂಪಣ್ಣ ಆರೋಪದಲ್ಲಿ ಹುರುಳಿಲ್ಲ ಅಂತ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಹೇಳಿದರು. ಈ ಬಗ್ಗೆ ಬೇಕಾದ್ರೆ ಲೋಕಾಯುಕ್ತರಿಗೆ ದೂರು ನೀಡಿ, ತನಿಖೆಯಾಗುತ್ತದೆ, ಈಗ ಲೋಕಾಯುಕ್ತಕ್ಕೆ ಬಲಬಂದಿದೆ, ಹೀಗಾಗಿ ಕೆಂಪಣ್ಣ ಅವರು ಮಾತನಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಅಂತ ಹೇಳಿದರು.
ಈ ನಡುವೆ ರಾಜ್ಯದಲ್ಲಿ ಮತ್ತೆ ಕಮಿಷನ್ ಆರೋಪ ಜೋರಾಗಿದ್ದು, ಶಾಸಕರು, ಸಚಿವರು ಸೇರಿದಂತೆ ಪ್ರತಿಯೊಬ್ಬರಿಗೆ 10% ಕೊಡಬೇಕು ಎಂದು ಗುತ್ತಿದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಧ್ಯಮಗಳ ಮುಂದೆ ಸ್ವಷ್ಟನೆ ನೀಡಿದ್ದಾರೆ.
ಸಭೆ ನಡೆದ ಬಳಿಕ ಗುತ್ತಿದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಧ್ಯಮಗೊಂದಿಗೆ ಮಾತನಾಡಿ ನಾವು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಪ್ರಕರಣ ಸಂಬಂಧ ಯಾವ್ದೆ ದಾಖಲೆಗಳನ್ನು ಕೊಟ್ಟಿಲ್ಲ. ಕಮಿಷನ್ ಬಗ್ಗೆ ʻನ್ಯಾಯಾಂಗ ತನಿಖೆ ಮಾಡುತ್ತಾರೆ ಎಂದರೆ ನಾವು ದಾಖಲೆ ಸಮೇತ ನೀಡುತ್ತೇವೆ ಇತ್ತಿಚೇಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವನ್ನಪ್ಪಿದ್ದರು ಸರ್ಕಾರ ಈ ಬಗ್ಗೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಗುತ್ತಿದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಿಡಿ ಕಾಡಿದ್ದಾರೆ .
ಕಳೆದ 1 ವರ್ಷದಿಂದ ಹೋರಾಟ ಮಾಡ್ತಿದ್ದೇವೆ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗಬೇಕೆಂದ್ರೆ ಶಾಸಕರು , ಸಚಿವರಿಗೆ 10% ಕಮಿಷನ್ ಪಡೆಯುತ್ತಿದ್ದಾರೆ. ಸಿಎಂ ಬೊಮ್ಮಾಯಿ ಮಾತಿಗೂ ಬೆಲೆ ಇಲ್ಲದಂತಾಗಿದೆ. ಇನ್ನೂ15 ದಿನಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಮತ್ತೊಂದು ಪತ್ರ ಬರೆಯುತ್ತೇವೆ ಎಂದು ಕೆಂಪಣ್ಣ ಕಿಡಿಕಾರಿದ್ದಾರೆ.
ಮಾನಮರ್ಯಾದೆ ಇಲ್ಲದೆ ಜನ ಪ್ರತಿನಿಧಿಗಳು. ನ್ಯಾಯಾಂಗ ತನಿಖೆ ಮಾಡಿದ್ರೆ ದಾಖಲೆ ಕೊಡುತ್ತೇವೆ ದಾಖಲೆ ಕೊಟ್ಟರೆ ಗುತ್ತಿಗೆದಾರರಿಗೆ ತೊಂದರೆ ಆಗೊ ಭಯವಿದೆ. ಸಿದ್ದರಾಮಯ್ಯಗೆ ಎಲ್ಲಾ ಮಾಹಿತಿ ನೀಡಿದ್ದೇವೆ. ಸದನದಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆಂದು ಕೆಂಪಣ್ಣ ಮಾಧ್ಯಮಗಳಿಗೆ ಬಹಿರಂಗವಾಗಿ ಮಾಹಿತಿ ನೀಡಿದ್ದಾರೆ.
ಎಲ್ಲಾ ಎಂಎಲ್ಎ ಸಚಿವರೂ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದ್ದಾರೆ ಯಾರಿಗೂ ರ್ಯಾಂಕಿಂಗ್ ಕೋಡದಕ್ಕೆ ಆಗೋದಿಲ್ಲ. ಸಿಎಂ ಬೊಮ್ಮಾಯಿ ಒಳ್ಳೆಯ ವ್ಯಕ್ತಿ. ಅವರು ಸೂಚನೆ ನೀಡಿದ್ರೂ ಗುತ್ತಿಗೆದಾರರ ಹಣ ಬಿಡುಗಡೆ ಮಾಡುತ್ತಿಲ್ಲ . ಬೊಮ್ಮಾಯಿ ಅಸಹಾಯ ಸ್ಥಿತಿಯಲ್ಲಿದ್ದಾರೆ. ಸಿಎಂ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಕೆಂಪಣ್ಣ ಕಿಡಿಕಾರಿದ್ದಾರೆ.
Vasthu Tips: ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೇ? ಈ ವಾಸ್ತು ಸಲಹೆಗಳನ್ನು ಅನುಸರಿಸಿ