ಬಿಹಾರ: ಲಾಲು ಪ್ರಸಾದ್ ಯಾದವ್ ಅವರ ಅಧಿಕಾರಾವಧಿ ವೇಳೆ ಬಿಹಾರದಲ್ಲಿ ನಡೆದ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ನಾಯಕರಾದ ಅಶ್ಫಾಕ್ ಕರೀಮ್ ಮತ್ತು ಸುನಿಲ್ ಸಿಂಗ್ ಅವರ ಮೇಲೆ ಕೇಂದ್ರೀಯ ತನಿಖಾ ದಳವು ದಾಳಿ(ಸಿಬಿಐ) ನಡೆಸಿದೆ. ಕೇಂದ್ರೀಯ ಏಜೆನ್ಸಿಯು ಅನೇಕ ಸ್ಥಳಗಳಲ್ಲಿ ದಾಳಿಗಳನ್ನು ನಡೆಸುತ್ತಿದೆ.
ಸುನಿಲ್ ಸಿಂಗ್, “ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಅದಕ್ಕೆ ಯಾವ ಅರ್ಥವೂ ಇಲ್ಲ. ಭಯದಿಂದ ಶಾಸಕರು ತಮ್ಮ ಪರವಾಗಿ ಬರುತ್ತಾರೆ ಎಂದು ಭಾವಿಸಿ ಅವರು ಅದನ್ನು ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಜೆಡಿ ಸಂಸದ ಮನೋಜ್ ಝಾ, “ಇದು ಇಡಿ ಅಥವಾ ಐಟಿ ಅಥವಾ ಸಿಬಿಐ ದಾಳಿಯಾಗಿದೆ ಎಂದು ಹೇಳುವುದು ನಿಷ್ಪ್ರಯೋಜಕ, ಇದು ಬಿಜೆಪಿಯ ದಾಳಿಯಾಗಿದೆ. ಅವರು ಈಗ ಬಿಜೆಪಿ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಅವರ ಕಚೇರಿಗಳು ಬಿಜೆಪಿ ಲಿಪಿಯೊಂದಿಗೆ ಕಾರ್ಯನಿರ್ವಹಿಸುತ್ತವೆ. ಇಂದು ವಿಶ್ವಾಸಮತ ಯಾಚನೆ (ಬಿಹಾರ ವಿಧಾನಸಭೆಯಲ್ಲಿ) ಮತ್ತು ಇಲ್ಲಿ ಏನಾಗುತ್ತಿದೆ? ಅದು ಊಹಿಸಬಹುದಾದಂತಿದೆ.” ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
Bihar | Raids by a Central Agency are underway at the residence of RJD MLC Sunil Singh, in Patna. More details awaited pic.twitter.com/TyQsy9khaL
— ANI (@ANI) August 24, 2022