ಗದಗ : ಮಂಗವೊಂದು ನಾಯಿ ಮರಿಯನ್ನು ತನ್ನದೇ ಮರಿ ಎನ್ನುವಂತೆ ಅಪ್ಪಿಕೊಂಡು ಇರುವ ದೃಶ್ಯವೊಂದು ವೈರಲ್ ಆಗುತ್ತಿದೆ. ನಗರದ ವಿವೇಕಾನಂದ ನಗರದ ನಾಲ್ಕನೇ ಕ್ರಾಸ್ ನ ಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಜನತೆ ಈ ಘಟನೆಯನ್ನು ನೋಡಿ ಬಾಂಧ್ಯವನ್ನು ಹೊಗಳುತ್ತಿದ್ದಾರೆ.
ಮಲಗುವಾಗಲೂ ಪಕ್ಕದಲ್ಲೇ ಮಲಗಿಸಿಕೊಂಡು ನಾಯಿಯನ್ನು ಕಾಪಾಡುತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಎಲ್ಲೆ ಹೋದರು ಕೂಡ ಈ ಕೋತಿ ಬಾಯಲ್ಲಿ ಕಚ್ಚಿಕೊಂಡೇ ನಾಯಿಯನ್ನು ಎತ್ತಿಕೊಂಡು ಓಡಾಡುತ್ತಿದೆ. ಕಣ್ಣೂ ತೆರೆಯದ ಪುಟ್ಟ ನಾಯಿಮರಿಯನ್ನು ಅಪ್ಪಿಕೊಂಡು ತನ್ನದೇ ಮಗು ಎನ್ನುವಂತೆ ಜೋಪಾನವಾಗಿ ಕಾಪಾಡುತ್ತಿರುವುದು ಎಲ್ಲರ ಅಚ್ಚರಿಗೆ ಪಾತ್ರವಾಗಿದೆ.