ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಬಟ್ಟೆ ತರಲು ಕರೆದುಕೊಂಡು ಹೋಗಿಲ್ಲ ಅಂತಾ ಹೇಳಿ ಬೇಸರಗೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈಶಾಲಿ, ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಹಬ್ಬದ ಪ್ರಯುಕ್ತ ಮೂವರು ಮಕ್ಕಳ ಪೈಕಿ ವೈಶಾಲಿಗೆ ಮೊದಲೇ ಬಟ್ಟೆ ಖರೀದಿಸಿ ತಂದಿದ್ದರು. ಇಬ್ಬರು ಮಕ್ಕಳಿಗೆ ತಂದಿರಲಿಲ್ಲ. ಹೀಗಾಗಿ ಆ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಟ್ಟೆ ಅಂಗಡಿ ಹೋಗಿದ್ದಾರೆ. ಈ ವೇಳೆ ವೈಶಾಲಿ ಕರೆದುಕೊಂಡು ಹೋಗಿಲ್ಲ ಎಂದು ಆತ್ಮಹತ್ಯೆ ನಡೆಸಿದ್ದಾರೆ.