ಶಿವಮೊಗ್ಗ: ಜಿಲ್ಲೆಯ ಸಾಗರದ ಆರ್ಯ ಈಡಿಗರ ಸಂಘದಿಂದ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಹಾಗೂ ಪದವಿಯಲ್ಲಿ ಅತಿಹೆಚ್ಚು ಅಂಕಗಳಿಸಿದಂತ ಆರ್ಯ ಈಡಿಗ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
BIGG NEWS: ಹಾಸನದಲ್ಲಿ ಹಾಡಹಗಲೇ ಪಿಸ್ತೂಲ್ ಹಿಡಿದು ಬಿಜೆಪಿ ನಾಯಕನ ಮನೆಗೆ ನುಗ್ಗಿದ ದುಷ್ಕರ್ಮಿಗಳು
ಈ ಕುರಿತಂತೆ ಸಾಗರ ಪ್ರಾಂತ ಆರ್ಯ ಈಡಿಗ ಸಂಘದ ಕಾರ್ಯದರ್ಶಿ ಎಂ.ಸಿ ಪರಶುರಾಮಪ್ಪ, ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘ (ರಿ.) ಸಾಗರ ಹಾಗೂ ದಾನಿಗಳಾದ 1) ಶ್ರೀಯುತ ಹೆಚ್.ಚನ್ನಪ್ಪ ಮತ್ತು ಶ್ರೀಮತಿ ಬಂಗಾರಮ್ಮ, ಹುಣಸೇಕಟ್ಟೆ, ಶಿಕಾರಿಪುರ ತಾ||, 2) ಶ್ರೀಮತಿ ವಸುಂಧರಾ ಮತ್ತು ಶ್ರೀಯುತ ಟಿ.ವಿ. ಪಾಂಡುರಂಗ ಸಾಗರ, 3) ಶ್ರೀಮತಿ ಸಾವಿತ್ರಿ ಮತ್ತು ಶ್ರೀಯುತ ಪಿ.ರಾಮಪ್ಪ, ಸೈದೂರು, ಸಾಗರ ತಾಲ್ಲೂಕು, 4) ಶ್ರೀಯುತ ಕೆ.ಸಿ.ಶಿವಪ್ಪ ಕಲಸೆ, ಸಾಗರ ತಾಲ್ಲೂಕು ಇವರುಗಳ ಪ್ರತಿಭಾ ಪುರಸ್ಕಾರ ದತ್ತಿನಿಧಿಯಿಂದ 2021-2022ನೇ ಸಾಲಿನ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. ಡಿಪ್ಲೊಮಾ (ತಾಂತ್ರಿಕ) ಮತ್ತು ಪದವಿಯಲ್ಲಿ (ಬಿ.ಎ., ಬಿ.ಎಸ್ಸಿ., ಬಿ.ಕಾಂ, ಬಿ.ಬಿ.ಎಂ., ಚಿ.ಇ..) ಅತಿ ಹೆಚ್ಚು ಅಂಕಗಳಿಸಿದ ತಾಲ್ಲೂಕಿನ ಈಡಿಗ ಸಮಾಜದ ವಿದ್ಯಾರ್ಥಿಗಳಿಂದ “ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ದೃಢೀಕೃತ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿಗಳನ್ನು ದಿನಾಂಕ : 20-09-2022ರ ಒಳಗಾಗಿ ಕಾರ್ಯದರ್ಶಿ ಎಂ.ಸಿ. ಪರಶುರಾಮಪ್ಪ ಮುಳುಕ್ಕೇರಿ, ಈಡಿಗರ ಸಮುದಾಯ ಭವನ, ವರದಹಳ್ಳಿ ರಸ್ತೆ ಸಾಗರ, ಮೊ : 9449010450 ಇಲ್ಲಿಗೆ ತಲುಪಿಸಬೇಕು. ದಿನಾಂಕ 20-09-2022 ರ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ವರದಿ: ಉಮೇಶ್ ಮೊಗವೀರ, ಸಾಗರ
BIGG NEWS : `ಮಡಿಕೇರಿ ಚಲೋ’ ಮುಂದೂಡಿಕೆ : ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಬಿಎಸ್ ವೈ ಅಭಿನಂದನೆ