ಬೆಂಗಳೂರು : ಕೊರೊನಾ ವೈರಸ್ ಬೆನ್ನಲ್ಲೇ ರಾಜ್ಯದಲ್ಲಿ ಡೆಂಗ್ಯೂ ಅಬ್ಬರ ಹೆಚ್ಚಳವಾಗಿದ್ದು, ಆಗಸ್ಟ್ ತಿಂಗಳಲ್ಲಿ 1,000 ಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 5,023 ಕ್ಕೆ ಏರಿಕೆಯಾಗಿದೆ.
Rain In Karnataka : ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜುಲೈ ಅಂತ್ಯದಲ್ಲಿ ಡೆಂಗ್ಯೂ ಪ್ರಕರಣಗಳು 4 ಸಾವಿರದ ಆಸುಪಾಸಿನಲ್ಲಿದ್ದವು, ಪ್ರಸಕ್ತ ಆಗಸ್ಟ್ ತಿಂಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಬೆಂಗಳೂರಿನಲ್ಲಿ ಒಟ್ಟು 1102 ಪ್ರಕರಣಗಳು ಪತ್ತೆಯಾಗಿದ್ದರೆ. ಉಡುಪಿಯಲ್ಲಿ 2, ಚಿಕ್ಕಬಳ್ಳಾಪುರ, ವಿಜಯಪುರದಲ್ಲಿ ತಲಾ ಒಬ್ಬರು ಡೆಂಗ್ಯೂಗೆ ಬಲಿಯಾಗಿದ್ದಾರೆ.
ಜಮ್ಮು & ಕಾಶ್ಮೀರ ಕತ್ರಾದಲ್ಲಿ ಭೂಕಂಪ: 3.9 ತೀವ್ರತೆ ದಾಖಲು | Earthquake in Katra
ಬೆಂಗಳೂರಿನಲ್ಲಿ 1102, ಮೈಸೂರು 459, ಉಡುಪಿ 418, ದಕ್ಷಿಣ ಕನ್ನಡ 224, ಚಿತ್ರದುರ್ಗ 213, ಶಿವಮೊಗ್ಗ 199, ಹಾಸನ 180,ಮಂಡ್ಯ 155, ಚಿಕ್ಕಬಳ್ಳಾಪುರ 139, ಚಾಮರಾಜನಗರ 120,ಕೋಲಾರ 118, ಚಿಕ್ಕಮಗಳೂರು 108,ಬೆಳಗಾವಿ 161, ವಿಜಯಪುರ 160, ಕೊಪ್ಪಳ 115, ಬಳ್ಳಾರಿ 108, ದಾವಣಗೆರೆ143, ಕಲಬುರಗಿ 146 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.