ಬೆಂಗಳೂರು: ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವಂತ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ( Teacher Recruitment ) ಇನ್ನೂ 3 ಸಾವಿರ ಹುದ್ದೆ ಖಾಲಿ ಉಳಿಯುವ ಸಾಧ್ಯತೆ ಇದೆಯಂತೆ. ಹೀಗಾಗಿ ಖಾಲಿ ಹುದ್ದೆಗಳ ನೇಮಕಕ್ಕೆ ಪುನಃ ಪರೀಕ್ಷೆ ನಡೆಯಲಿದೆ. ಅಲ್ಲದೇ ಶಿಕ್ಷಕರಾಗಲು ಮತ್ತೊಂದು ಛಾನ್ಸ್ ಸಿಗಲಿದೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಶಿಕ್ಷಕರ ಹುದ್ದೆ ( Teacher Jobs ) ನಿರೀಕ್ಷೆಯಲ್ಲಿದ್ದಂತವರಿಗೆ ಭರ್ಜರಿ ಗುಡ್ ನ್ಯೂಸ್ ಸಿಗಲಿದೆ.
BIGG NEWS: ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ- ಬಿ.ವೈ ವಿಜಯೇಂದ್ರ ವಾಗ್ದಾಳಿ
ಹೌದು.. ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಗಳ ನಿರೀಕ್ಷೆಯಲ್ಲಿದ್ದವರಿಗೆ ಶೀಘ್ರವೇ ಸಿಹಿಸುದ್ದಿ ಸಿಗಲಿದೆ. 15 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಯ ನಂತ್ರ, ಉಳಿಯುವ ಹುದ್ದೆಗಳಿಗೆ ಫೆಬ್ರವರಿಯಲ್ಲಿ ಮತ್ತೊಮ್ಮೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೀಗಾಗಿ ಅಲ್ಪ ಅಂಕಗಳಲ್ಲಿ ಸಿಇಟಿಯಿಂದ ಅನರ್ಹರಾಗಿರುವ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಸಿಇಟಿ ಬರೆಯುವಂತ ಅವಕಾಶ ಸಿಗಲಿದೆ. ಏಕೆಂದ್ರೇ.. 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ಈ ಬಾರಿ ಸಿಟಿಯಿಲ್ಲಿ ಉತ್ತೀರ್ಣರಾಗಿರುವ 54,342 ಅಭ್ಯರ್ಥಿಗಳನ್ನು ವಿಷಯವಾರು, ಜಿಲ್ಲಾವಾರು, ಮೀಸಲಾತಿವಾರ ವಿಂಗಡಣೆ ಮಾಡಿದಾಗ, ಮೂರು ಸಾವಿರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳೇ ಇಲ್ಲದಂತಾಗಿದೆ.
ಅಂದಹಾಗೇ ರಾಜ್ಯದಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು ಮತ್ತು ಅರ್ಹತೆ ಪಟ್ಟಿ ನೋಡಿದ್ರೇ, ಅನುಪಾತದಲ್ಲಿ 1:4 ಅರ್ಹರಿದ್ದಾರೆ. ಆದ್ರೇ ಜಿಲ್ಲಾವಾರು ನೋಡಿದಾಗ ಕೆಲವು ವಿಷಯಗಳಲ್ಲಿ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಿಂತ ಕಡಿಮೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿದ್ದಾರೆ. ಇದಲ್ಲದೇ ಮಾಜಿ ಸೈನಿಕ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ, ಅಂಗವಿಕಲ, ಹೈ-ಕ ಭಾಗ ಸೇರಿದಂತೆ ವಿವಿಧ ಮೀಸಲಾತಿಗಳಲ್ಲಿಯೂ ಕಡಿಮೆ ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಮೂರು ಸಾವಿರದಷ್ಟು ಶಿಕ್ಷಕರ ಹುದ್ದೆಗಳು ಬಾಕಿ ಉಳಿಯುವ ಕಾರಣ, ಶೀಘ್ರದಲ್ಲೇ ಆ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ.